ರೋಟರಿ ಕ್ಲಬ್​ ಪದಾಧಿಕಾರಿಗಳ ಪದಗ್ರಹಣ ಜು. 6ರಂದು

je721538035802367-abc
Published on

ರಾಣೆಬೆನ್ನೂರ: ಸ್ಥಳಿಯ ರೋಟರಿ ಕ್ಲಬ್​ ಹಾಗೂ ಇನ್ನರ್​ ವಿಲ್​ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚಿಗೆ ಜರುಗಿತು.

ನಿವೃತ್ತ ಯೋಧ ಬಿ.ಜಿ. ಹಿರೇಮಠ (ಅಧ್ಯಕ್ಷ), ಡಾ. ನಾರಾಯಣ ಪವಾರ (ಕಾರ್ಯದಶಿರ್), ಶಿವಯೋಗಿ ಅಂಗಡಿ (ಸಹ ಕಾರ್ಯದಶಿರ್), ಉಮೇಶ ಹೊನ್ನಾಳಿ (ಖಜಾಂಚಿ) ಹಾಗೂ ಜಿ.ಜಿ. ಹೊಟ್ಟಿಗೌಡ್ರ (ಕಾರ್ಯನಿರ್ವಾಹಕ ಕಾರ್ಯದಶಿರ್)ಯಾಗಿ ಅವಿರೋಧವಾಗಿ ಆಯ್ಕೆಯಾದರು. ಇನ್ನರ್​ ವ್ಲೀಲ್​ ಅಧ್ಯಕ್ಷೆಯಾಗಿ ಡಾ. ದೀಪಾಲಿ ಪುನೀತ, ಕಾರ್ಯದಶಿರ್ ಪುಷ್ಪಾ ಮಾಳಗಿ, ಸಹ ಕಾರ್ಯದಶಿರ್ ಮಾಲತಿ ಮಾಚೇನಹಳ್ಳಿ, ಖಜಾಂಚಿ ಪ್ರಮೀಳಾ ಜಂಬಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜು. 6ರಂದು ಸಂಜೆ 5.30ಕ್ಕೆ ನಗರದ ವರ್ತಕರ ಸಮುದಾಯ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ಜರುಗಲಿದೆ. ಜಿಲ್ಲಾ ಮಾಜಿ ಗೌರನ್ನರ್​ ಗಣೇಶ ಭಟ್​ ಹಾಗೂ ಮಾಜಿ ಗೌರನ್ನರ್​ ಮೀನಾ ಗುಪ್ತಾ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವರು. ಉಪ ಗೌರನ್ನರ್​ ದಯಾನಂದ ಯಡ್ರಾಮಿ ಮುಖ್ಯ ಅತಿಥಿಗಳಾಗಿ ಆಗಮಿಸುವರೆಂದು ರೋಟರಿ ಸಂಸ್ಥೆಯ ಹಾಲಿ ಅಧ್ಯಕ್ಷ ವೀರೇಶ ಮೋಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net