

Cristiano Ronaldo: ನಾಲ್ಕು ವಿಭಿನ್ನ ಕ್ಲಬ್‌ಗಳ ಪರವಾಗಿ 100 ಗೋಲುಗಳನ್ನು ಹೊಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪೋರ್ಚುಗಲ್ ಪುಟ್ಬಾಬ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಪಾತ್ರರಾಗಿದ್ದಾರೆ.
ಹಾಂಗ್ ಕಾಂಗ್ ಕ್ರೀಡಾಂಗಣದಲ್ಲಿ ನಡೆದ ಸೌದಿ ಸೂಪರ್ ಕಪ್ ಫೈನಲ್ ಪಂದ್ಯದ ಮೊದಲಾರ್ಧದಲ್ಲಿ ಗೋಲು ಹೊಡೆಯುವ ಮೂಲಕ ರೊನಾಲ್ಡೊ ಸೌದಿ ಅರೇಬಿಯನ್ ಕ್ಲಬ್ ಪರ 100 ಗೋಲುಗಳಿಸಿದ ವಿಶೇಷ ಸಾಧನೆ ಮಾಡಿದರು.2022ರ ಡಿಸೆಂಬರ್ನಲ್ಲಿ ಅಲ್-ನಾಸರ್ ಕ್ಲಬ್‌ಗೆ ಸೇರಿದ್ದರು.
ಕ್ರಿಸ್ಟಿಯಾನೊ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ಪರ 450, ಮ್ಯಾಂಚೆಸ್ಟರ್ ಯುನೈಟೆಡ್ ಪರ 145 ಮತ್ತು ಜುವೆಂಟಸ್ ಪರ 101 ಗೋಲುಗಳನ್ನು ಗಳಿಸಿದ್ದು, ರೊನಾಲ್ಡೊ ಮೂರು ಕ್ಲಬ್‌ಗಳಿಗೆ 100 ಬಾರಿ ಗೋಲು ಗಳಿಸಿದ ಮೂವರು ಆಟಗಾರರಿಗಿಂತ ಮುಂದಿದ್ದರು. 1930 ರಿಂದ 1948 ರವರೆಗೆ ಸ್ಪೇನ್‌ನಲ್ಲಿ ಆಡಿದ್ದ ಇಸಿಡ್ರೊ ಲಂಗಾರ ಹಾಗೂ ಬ್ರೆಜಿಲಿಯನ್ ತಾರೆಗಳಾದ ರೊಮಾರಿಯೊ ಮತ್ತು ನೇಮಾರ್ ಈ ಸಾಧನೆ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಯಾವುದೇ ಪ್ರಮುಖ ಟ್ರೋಫಿಯನ್ನು ಗೆಲ್ಲದ ರೊನಾಲ್ಡೊ, ಪೋರ್ಚುಗಲ್ ಪರ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 138 ಗೋಲುಗಳನ್ನು ಗಳಿಸಿದ್ದಾರೆ.ಅಲ್ಲದೆ, 5 ಬಾರಿ ಬ್ಯಾಲನ್ ಡಿ'ಓರ್ ವಿಜೇತರಾಗಿದ್ದಾರೆ.
ಸೌದಿ ಸೂಪರ್ ಕಪ್ ಫೈನಲ್ ಪಂದ್ಯದಲ್ಲಿ 2-2 ರಿಂದ ಕೊನೆಗೊಂಡ ನಂತರ ಅಲ್-ನಾಸರ್ ಪೆನಾಲ್ಟಿ ಶೂಟೌಟ್‌ನಲ್ಲಿ ಅಲ್-ಅಹ್ಲಿ ವಿರುದ್ಧ 5-3ರಿಂದ ಸೋತಿತ್ತು. ಸೌದಿ ಅರೇಬಿಯನ್ ಋತುವಿನ ಮೊದಲ ಟ್ರೋಫಿಯನ್ನು ಅಲ್-ಅಹ್ಲಿ ಗೆದ್ದುಕೊಂಡಿತು.(ಏಜೆನ್ಸೀಸ್)