More

    ಕರೊನಾ ವಾರಿಯರ್ಸ್​​​ಗೆ ಮುಂಬೈನಲ್ಲಿ 8 ಹೊಟೇಲ್​ ವ್ಯವಸ್ಥೆ ಕಲ್ಪಿಸಿದ ಬಾಲಿವುಡ್​ ನಿರ್ದೇಶಕ

    ಮುಂಬೈ: ಬಾಲಿವುಡ್​ನಲ್ಲಿ ಈಗಾಗಲೇ ಸ್ಟಾರ್​ ಕಲಾವಿದರು ತಂತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ 25 ಕೋಟಿ ಕೊಟ್ಟರೆ, ಸಲ್ಮಾನ್​ ಖಾನ್​ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಇನ್ನು ಕೆಲವರು ಪಿಎಂ ಕೇರ್ಸ್​ಗೆ ಫಂಡಿಂಗ್​ ಮಾಡಿದ್ದಾರೆ. ಅದೇ ರೀತಿ ಶಾರುಖ್​ ಖಾನ್​ ಕಚೇರಿಯನ್ನೇ ಐಸೋಲೇಷನ್​ಗಾಗಿ ನೀಡಿದ್ದಾರೆ. ಇದೀಗ ಬಾಲಿವುಡ್​ನ ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ ಕರೊನಾ ವಾರಿಯರ್ಸ್​​ ಸಹಾಯಕ್ಕೆ ಬಂದಿದ್ದಾರೆ. ಹೌದು, ಕರೊನಾ ವಾರಿಯರ್ಸ್​ ಸಲುವಾಗಿ ಮುಂಬೈನ ಎಂಟು ಹೋಟೆಲ್​ಗಳಲ್ಲಿ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಾರೆ ರೋಹಿತ್​. ಈ ಹೋಟೆಲ್​ಗಳಲ್ಲಿ ಪೊಲೀಸ್​ ಸಿಬ್ಬಂದಿ ಒಂದಷ್ಟು ಹೊತ್ತು ವಿಶ್ರಮಿಸಬಹುದು. ಸ್ನಾನ ಮಾಡಿ, ಉಪಹಾರ ಸೇವಿಸಬಹುದು. ಅವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಎಲ್ಲ ವ್ಯವಸ್ಥೆ ಕಲ್ಪಿಸಿದ ರೋಹಿತ್​ ಶೆಟ್ಟಿಗೆ ಮುಂಬೈ ಪೊಲೀಸ್​ ಧನ್ಯವಾದ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts