ದೇಶೀಯ ಟೂರ್ನಿಯಲ್ಲಿ ಆಡುವಂತೆ Rohit, Virat ಕೊಹ್ಲಿಗೆ... ಬಿಸಿಸಿಐಗೆ ಎಚ್ಚರಿಕೆ ನೀಡಿದ ಪಾಕ್​ ಮಾಜಿ ಆಟಗಾರ

Virat Rohit
Published on

ನವದೆಹಲಿ: ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಾದ ವಿರಾಟ್​ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮ (Rohit Sharma) ಪ್ರಸ್ತುತ ರನ್​ ಬರವನ್ನು ಎದುರಿಸುತ್ತಿದ್ದು, ಈ ಇಬ್ಬರು ಆಟಗಾರರು ತಮ್ಮ ಫಾರ್ಮ್​ ನಿರೂಪಿಸಲು ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದ ರೋಹಿತ್ ಶರ್ಮ ಎರಡು ಇನ್ನಿಂಗ್ಸ್​ನಲ್ಲಿ 31 ರನ್​ಗಳಿಸಲಷ್ಟೇ ಶಕ್ತರಾದರು. ಜನವರಿ 30ರಂದು ರೈಲ್ವೇಸ್​ ವಿರುದ್ಧ ಆರಂಭವಾಗಲಿರುವ ಪಂದ್ಯದಲ್ಲಿ ಕೊಹ್ಲಿ ದೆಹಲಿ ಪರ ಕಣಕ್ಕಿಳಿಯಲಿದ್ದು, ಅವರ ಪ್ರದರ್ಶನದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಇನ್ನೂ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮ (Rohit Sharma)​ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆಡುತ್ತಿರುವುದು ಯಾಕೋ ಪಾಕಿಸ್ತಾನಕ್ಕೆ ಸರಿ ಕಾಣುತ್ತಿಲ್ಲವಂತೆ. ಬಿಸಿಸಿಐನ ಹೊಸ ನಿರ್ಧಾರಕ್ಕೆ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಆಟಗಾರ ರಶೀದ್​ ಲತೀಫ್​ ಈ ಬಗ್ಗೆ ಮಾತನಾಡಿದ್ದು, ರೋಹಿತ್ ಹಾಗೂ ವಿರಾಟ್​ ವೈಟ್​ಬಾಲ್​ ಕ್ರಿಕೆಟ್​ ಮೇಲೆ ಹೆಚ್ಚು ಫೋಕಸ್​ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

IANSಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಲತೀಫ್​, ಅಂತಾರಾಷ್ಟ್ರೀಯ ಕ್ಯಾಲೆಂಡರ್ ಗಮನಿಸಿದಾಗ ಆಟಗಾರರಿಗೆ ದೇಶೀಯ ಕ್ರಿಕೆಟ್​ ಟೂರ್ನಿ ಆಡಲು ಬಿಡುವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಅಗತ್ಯವಿದ್ದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಆದರೆ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿಯನ್ನು (Virat Kohli) ಗುರಿ ಮಾಡಲಾಗಿದ್ದು, ಒತ್ತಾಯಪೂರ್ವಕವಾಗಿ ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಆಡುವಂತೆ ಮಾಡಲಾಗುತ್ತಿದೆ. 

ಈ ಹಿಂದೆ ಸಚಿನ್ ತೆಂಡೂಲ್ಕರ್ ಹೊರತುಪಡಿಸಿ, ಇತರರು ಹೆಚ್ಚು ದೇಶೀಯ ಕ್ರಿಕೆಟ್ ಆಡಿಲ್ಲ. ರೋಹಿತ್ ಮತ್ತು ವಿರಾಟ್ ಅವರು ದೇಶೀಯ ಕ್ರಿಕೆಟ್ ಆಡದೆ T20 ವಿಶ್ವಕಪ್ ಗೆದ್ದಿದ್ದಾರೆ ಮುಂದೆ ಇಂಗ್ಲೆಂಡ್ ವಿರುದ್ಧದ ODI ಸರಣಿಯನ್ನು ಆಡುತ್ತಾರೆ. ವೈಟ್​ಬಾಲ್​ ಕ್ರಿಕೆಟ್​ ಸಂಪೂರ್ಣ ವಿಭಿನ್ನವಾಗಿರುವುದರಿಂದ ಇವರಿಬ್ಬರು ಹೆಚ್ಚಾಗಿ ಇದರ ಮೇಲೆ ಫೋಕಸ್​ ಮಾಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ರಶೀದ್​ ಲತೀಫ್​ IANSಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net