

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಮುಕ್ತಾಯದ ಹಂತಕ್ಕೆ ತಲುಪಿದ್ದು, ಇಂದು (ಜನವರಿ 26) ವಿಜೇತರ ಹೆಸರು ತಿಳಿದು ಬರಲಿದೆ. ಶನಿವಾರದ ಸಂಚಿಕೆಯಲ್ಲಿ ಸ್ಫರ್ಧಿ ಭವ್ಯಾ ಗೌಡ ಮನೆಯಿಂದ ಐದನೇ ರನ್ನರ್ಅಪ್ ಆಗಿ ಎಲಿಮಿನೇಟ್ ಆಗಿದ್ದು, ಇಂದಿನ ಸಂಚಿಕೆಯಲ್ಲಿ ಟಾಪ್ ಐದು ಕೆಂಟೆಸ್ಟೆಂಟ್ಸ್ ಯಾರಾಗಲಿದ್ದಾರೆ ಎಂಬ ವಿಚಾರ ರಿವೀಲ್ ಆಗಲಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗೀತಾ ಧಾರಾವಾಹಿ ಮೂಲಕ ಖ್ಯಾತಿ ಪಡೆದ ಭವ್ಯಾ ಗೌಡ ಬಿಗ್ಬಾಸ್ (BiggBoss) 11ನೇ ಆವೃತ್ತಿಯ ಮೊದಲ ಕಂಟೆಸ್ಟೆಂಟ್ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಈ ಸೀಸನ್ನಲ್ಲಿ ಬ್ಯಾಕ್ ಟು ಬ್ಯಾಕ್ ಕ್ಯಾಪ್ಟನ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಭವ್ಯಾ 64,48,853 ಮತಗಳನ್ನು ಪಡೆಯುವ ಮೂಲಕ ಮನೆಯಿಂದ ಮೊದಲು ಎಲಿಮಿನೇಟ್ ಆಗಿದ್ದಾರೆ. 5,23,89,318 ಕೋಟಿ ಮತ ಪಡೆದ ಸ್ಪರ್ಧಿ ಬಿಗ್ಬಾಸ್ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ.
ಸಿಕ್ಕಾಪಟ್ಟೆ ಬೇಸರವಾಗುತ್ತಿದೆ ಒಂದು ದಿನ ಮಿಸ್ ಮಾಡಿದೆ ಅನ್ನುವ ನೋವಿದೆ. ಇವತ್ತು ಅಳಬಾರದು ಖುಷಿಯಿಂದ ಹೋಗೋಣ ಅಂದುಕೊಂಡಿದ್ದೇನೆ ಎಲ್ಲ ಸ್ಪರ್ಧಿಗಳನ್ನು ಎದುರಿಸಿ ಟಾಪ್ 6 ಸ್ಪರ್ಧಿಯಾಗಿದ್ದೇನೆ ಎನ್ನುವುದಕ್ಕೆ ಖುಷಿ ಇದೆ ಎಂದು ಭವ್ಯಾ ಮನೆಯಿಂದ ಹೊರಬಂದ ಬಳಿಕ ವೇದಿಕೆಯಲ್ಲಿ ನಿರೂಪಕ ಸುದೀಪ್ ಬಳಿ ಹೇಳಿಕೊಂಡಿದ್ದಾರೆ.
ಇನ್ನೂ ಭವ್ಯಾ ಗೌಡ ಅವರಿಗೆ ದೊಡ್ಡ ಮಟ್ಟದಲ್ಲಿ ಬಹುಮಾನ ಸಿಕ್ಕಿದೆ. ಬಿಗ್ಬಾಸ್ (BiggBoss) ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಬಳಿಕ ಕಿಚ್ಚ ಸುದೀಪ್ ಅವರನ್ನು ಭೇಟಿಯಾದ ಬಳಿಕ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಕೃಷ್ಣ ಹಳ್ಳಿ ತುಪ್ಪದ ಕಡೆಯಿಂದ 2 ಲಕ್ಷ ರೂ., ಸುದರ್ಶನ್ ಸಿಲ್ಕ್ಸ್ ಕಡೆಯಿಂದ 1 ಲಕ್ಷ ರೂ. ಹಾಗೂ ಇಕೋ ಪ್ಲ್ಯಾನೆಟ್ ಎಲಿವೇಟರ್ ಕಡೆಯಿಂದ 50 ಸಾವಿರ ರೂ, ಬಹುಮಾನ ನೀಡಲಾಗಿದೆ. ಅಲ್ಲದೇ ಇಷ್ಟು ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಪ್ರತ್ಯೇಕ ಸಂಭಾವನೆಯನ್ನು ಭವ್ಯಾ ಅವರು ಪಡೆಯಲಿದ್ದಾರೆ.