ನವದೆಹಲಿ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಹೆಚ್ಚಾಗಿ ಪಾಸಿಟಿವ್ ವಿಷಯಗಳತ್ತ ಮಾತ್ರ ಗಮನ ಹರಿಸುತ್ತಾರೆ. ನೆಗಿಟಿವ್ ವಿಷಯಗಳು ಬಂದಾಗಲೆಲ್ಲ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಪ್ರೆಸ್ಮೀಟ್ಗಳಲ್ಲಿ ಯಾರಾದರೂ ಗಂಭೀರವಾದ ಪ್ರಶ್ನೆಗಳನ್ನು ಕೇಳಿದರೆ, ತಮಾಷೆಯಾಗಿ ಉತ್ತರ ನೀಡುವ ಮೂಲಕ ಎಲ್ಲರನ್ನೂ ನಗಿಸುತ್ತಾರೆ. ಆದರೆ, ಈ ಬಾರಿ ರೋಹಿತ್ ಕೆಲ ಗಂಭೀರವಾದ ಕಾಮೆಂಟ್ಗಳನ್ನು ಮಾಡಿದ್ದಾರೆ. ಟೀಮ್ ಇಂಡಿಯಾ ಸೋಲುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಭಾರತ ಸೋತರೆ ಅವರಿಗೆ ಸಂತೋಷವಾಗುತ್ತದೆ ಎಂದು ಶಾಕಿಂಗ್ ಹೇಳಿದ್ದಾರೆ. ಅಷ್ಟಕ್ಕೂ ರೋಹಿತ್ ಈ ಮಾತುಗಳನ್ನು ಹೇಳಿದ್ದೇಕೆ ಎಂಬುದನ್ನು ನಾವೀಗ ತಿಳಿಯೋಣ.
ನಾಳೆಯಿಂದ (ಸೆ.19) ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಾಯಕ ರೋಹಿತ್ ಶರ್ಮ ನಿನ್ನೆ (ಸೆ.17) ಸುದ್ದಿಗೋಷ್ಠಿಯಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪ ಮಾಡಿದರು. ಪ್ರತಿ ತಂಡವೂ ಟೀಮ್ ಇಂಡಿಯಾವನ್ನು ಸೋಲಿಸಲು ಎದುರು ನೋಡುತ್ತವೆ. ನಮ್ಮ ತಂಡವನ್ನು ಸೋಲಿಸಿದರೆ ಅವರಿಗೆ ಸಂತೋಷ ಸಿಗುತ್ತದೆ. ಆ ಸಂತೋಷವನ್ನು ಅವರು ಆನಂದಿಸಲಿ ಮತ್ತು ನಾವು ನಮ್ಮ ಸಂತೋಷವನ್ನು ಆನಂದಿಸುತ್ತೇವೆ ಎಂದು ಹೇಳಿದರು.
ಇಂಗ್ಲೆಂಡ್ ತಂಡ ಟೆಸ್ಟ್ ಸರಣಿಗಾಗಿ ಭಾರತಕ್ಕೆ ಬಂದಾಗ, ತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ನಮ್ಮ ವಿರುದ್ಧ ಮಿಶ್ರ ಟೀಕೆಗಳನ್ನು ಮಾಡಿದರು. ಆದರೆ ನಾವು ಅದರ ಬಗ್ಗೆ ಕಾಳಜಿ ವಹಿಸಲಿಲ್ಲ. ನಾವು ನಮ್ಮ ಆಟವಾಡಿದ್ದೇವೆ. ಉತ್ತಮ ಕ್ರಿಕೆಟ್ ಆಡುವುದಷ್ಟೇ ನಮ್ಮ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಎದುರಾಳಿ ತಂಡಗಳು ಸೋತರೆ ಖುಷಿಯಾಗುತ್ತದೆ ಮತ್ತು ಅದನ್ನೇ ಆನಂದಿಸಬೇಕು ಎಂದು ರೋಹಿತ್ ಹೇಳಿದರು. ಅಲ್ಲದೆ, ಉತ್ತಮ ಕ್ರಿಕೆಟ್ ಆಡುವ ಮೂಲಕ ಪ್ರತಿ ಪಂದ್ಯ ಹಾಗೂ ಸರಣಿ ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದರು.
ಟ್ರೋಫಿ ಗೆಲ್ಲುತ್ತೇವೆ ಎಂದು ಹೇಳುವ ಬದಲು ಪ್ರತಿಯೊಂದು ಸರಣಿಯನ್ನು ಪ್ರಮುಖವಾಗಿ ಪರಿಗಣಿಸಿ ಮುನ್ನಡೆಯುತ್ತೇವೆ ಎಂದು ಹೇಳುತ್ತೇವೆ. ನಮ್ಮ ಅತ್ಯುತ್ತಮ ಆಟಗಾರರನ್ನು ಕಣಕ್ಕಿಳಿಸಿ ಎದುರಾಳಿಗಳನ್ನು ಸೋಲಿನ ದವಡೆಗೆ ತಳ್ಳಲು ನಾನು ಪ್ರಯತ್ನಿಸುತ್ತೇವೆ. ಮೈದಾನಕ್ಕಿಳಿದರೆ ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಎಂಬುದರ ಮೇಲೆಯೇ ನಮ್ಮ ಸಂಪೂರ್ಣ ಗಮನ ಇರುತ್ತದೆ ಎಂದು ರೋಹಿತ್ ಹೇಳಿದರು.
ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ಧ್ರುವ ಜುರೆಲ್ ಅವರಂತಹ ಯುವ ಆಟಗಾರರು ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯ. ಅವರನ್ನು ಇನ್ನಷ್ಟು ಸಾಣೆ ಹಿಡಿಯಬೇಕು ಎಂದು ರೋಹಿತ್ ಶರ್ಮ ಹೇಳಿದರು. (ಏಜೆನ್ಸೀಸ್)
Rohit Sharma said, “sab team ko India ko harana mein maza aata hain, maza lene do unhe (all teams like to beat India, let them enjoy). When England came they also spoke a lot in the press, but we don’t focus on that. We try to play good cricket”. pic.twitter.com/oVnZNDMm2D
— Mufaddal Vohra (@mufaddal_vohra) September 17, 2024
ತಾಯಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವ ಗುರಿ: ಗೂಗಲ್ನಲ್ಲಿ ಕೆಲ್ಸ ಗಿಟ್ಟಿಸಿದ ಯುವಕನ ಸಂಬಳ ಕೇಳಿದ್ರೆ ಬೆರಗಾಗ್ತೀರಾ!
ಮಗನ 83 ಕೆಜಿ ತೂಕದಷ್ಟೇ ಹಣವಿಟ್ಟು ತುಲಾಭಾರ ನೇರವೇರಿಸಿದ ರೈತ! ಒಟ್ಟು ಮೊತ್ತ ಕೇಳಿದ್ರೆ ಬೆರಗಾಗ್ತೀರಾ