More

    ಲಾಕ್‌ಡೌನ್ ವೇಳೆ ಪತ್ನಿಯೇ ಸ್ಟಾರ್ ಎಂದ ಹಿಟ್‌ಮ್ಯಾನ್

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಬಲೆಗೆ ಸಿಲುಕಿದೆ. ಈ ಲಾಕ್‌ಡೌನ್ ಪ್ರತಿಯೊಬ್ಬರಿಗೂ ಒಂದೊಂದು ಬಗೆ ಪಾಠ ಕಲಿಸಿದೆ ಎಂದರೂ ತಪ್ಪಿಲ್ಲ. ಅದರಲ್ಲೂ ಕುಟುಂಬದಿಂದ ದೂರ ಉಳಿದಿದ್ದ ಮಂದಿಗೆ ಭಾವನಾತ್ಮಕ ಸಂದೇಶ ನೀಡಿದೆ. ಇದರಿಂದ ಕೌಟುಂಬಿಕ ಮೌಲ್ಯವೂ ಹೆಚ್ಚಿದೆ. ಕ್ರೀಡಾಪಟುಗಳಂತೂ ಕುಟುಂಬದೊಂದಿಗೆ ಕಾಲ ಕಳೆಯುವುದೇ ಅಪರೂಪ. ಅದರಲ್ಲೂ ಕ್ರಿಕೆಟಿಗರು ವರ್ಷಪೂರ್ತಿ ಪ್ರವಾಸದಲ್ಲೇ ಮುಳುಗಿರುತ್ತಿದ್ದರು. ಆರಂಭಿಕ ಬ್ಯಾಟ್ಸ್‌ಮನ್, ಟೀಮ್ ಇಂಡಿಯಾದಲ್ಲಿ ಹಿಟ್‌ಮ್ಯಾನ್ ಎನಿಸಿಕೊಂಡಿರುವ ರೋಹಿತ್ ಶರ್ಮ ಲಾಕ್‌ಡೌನ್ ವೇಳೆ ನನ್ನ ಪತ್ನಿಯೇ ನನಗೆ ಸ್ಟಾರ್ ಎಂದು ಬಿರುದು ನೀಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪತ್ನಿಯ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಲಾಕ್‌ಡೌನ್ ವೇಳೆ ಪತ್ನಿಯೇ ಸ್ಟಾರ್ ಎಂದ ಹಿಟ್‌ಮ್ಯಾನ್

    ಇದನ್ನೂ ಓದಿ: ಭಾರತ, ಮೋದಿ ವಿರುದ್ಧ ಅಫ್ರಿದಿ ಎಷ್ಟೇ ವಿಷ ಕಾರಿದ್ರೂ ಕಾಶ್ಮೀರ ಪಡೆಯಲಾಗದು: ಗೌತಮ್​ ಗಂಭೀರ್​​

    ಟೀಮ್ ಇಂಡಿಯಾದ ನಿಗದಿತ ಓವರ್‌ಗಳ ತಂಡದ ಉಪನಾಯಕ ರೋಹಿತ್, ಲಾಕ್‌ಡೌನ್‌ನಿಂದಾಗಿ ಕಳೆದ 2 ತಿಂಗಳಿಂದಲೂ ಮುಂಬೈನಲ್ಲಿ ಪತ್ನಿ ರಿತಿಕಾ ಹಾಗೂ ಒಂದು ವರ್ಷದ ಪುತ್ರಿಯೊಂದಿಗೆ ಕಾಲಕಳೆಯುತ್ತಿದ್ದಾರೆ. ಪತ್ನಿಯೊಂದಿಗೆ ಅಡುಗೆ, ವಿಡಿಯೋ ಗೇಮ್, ಮಗಳ ಆರೈಕೆಯಲ್ಲಿ ತೊಡಗಿರುವ ರೋಹಿತ್ ಶರ್ಮ, ಈ ವೇಳೆ ಕುಟುಂಬದ ಮೌಲ್ಯ ಕುರಿತು ಪಾಠ ಕಲಿಸಿದ ನಿನಗೆ (ಪತ್ನಿ) ಯಾವಾಗಲೂ ಆಭಾರಿಯಾಗಿರುತ್ತೇನೆ. ಪ್ರತಿದಿನವೂ ನಿನ್ನಿಂದ ಹೊಸ ಪಾಠ ಕಲಿಯುತ್ತಿದ್ದೇನೆ. ಹಿಂದೆ ನಾನು ಏನು ಮಿಸ್ ಮಾಡಿಕೊಂಡಿದ್ದೆ ಎಂಬುದು ಈ ತಿಳಿಯಿತು. ಕಲಿಕೆ ನಿರಂತರ ಎಂಬುದನ್ನು ನಿನ್ನಿಂದ ಕಲಿತೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪತ್ನಿಯೊಂದಿಗಿರುವ ಚಿತ್ರದೊಂದಿಗೆ ರೋಹಿತ್ ಬರೆದುಕೊಂಡಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಮಿಸ್ ಮಾಡಿಕೊಳ್ಳುತ್ತಿದ್ದ ಕೌಟುಂಬಿಕ ಮೌಲ್ಯಗಳನ್ನು ಈ ವೇಳೆ ಪಡೆದುಕೊಂಡೆ ಎಂದಿದ್ದಾರೆ. ರೋಹಿತ್ ಶರ್ಮ ಪೋಸ್ಟ್‌ಗೆ ಹಲವು ಕ್ರಿಕೆಟಿಗರೂ ಪ್ರತಿಕ್ರಿಯಿಸಿದ್ದಾರೆ.

    ಲಾಕ್‌ಡೌನ್ ವೇಳೆ ಪತ್ನಿಯೇ ಸ್ಟಾರ್ ಎಂದ ಹಿಟ್‌ಮ್ಯಾನ್

    ಮುಂಬೈನ ವೊರ್ಲಿಯಲ್ಲಿ ರೋಹಿತ್ ಶರ್ಮ ಪತ್ನಿ ಹಾಗೂ ಮಗಳು ಸಮೈರಾ ಜತೆ ನೆಲೆಸಿದ್ದಾರೆ. ಎರಡು ವರ್ಷದ ಹಿಂದಷ್ಟೇ ಸಮುದ್ರದತ್ತ ನೋಟ ಹೊಂದಿರುವ ಅಪಾರ್ಟ್‌ಮೆಂಟ್‌ನ 29ನೇ ಮಹಡಿಯಲ್ಲಿ ್ಲಾಟ್ ಅನ್ನು ರೋಹಿತ್ ಶರ್ಮ 30 ಕೋಟಿ ರೂಪಾಯಿಗೆ ಖರೀದಿಸಿದ್ದರು. ರೋಹಿತ್ ಬಿಡುವಿನ ವೇಳೆ ಟೀಮ್ ಇಂಡಿಯಾದ ಸಹ ಆಟಗಾರರೊಂದಿಗೆ ಇನ್‌ಸ್ಟಾಗ್ರಾಂ ಲೈವ್ ಮಾಡುತ್ತಿರುತ್ತಾರೆ. ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಠ 2 ವಿಶ್ವಕಪ್ ಜಯಿಸಬೇಕು ಎಂದು ಇತ್ತೀಚೆಗಷ್ಟೇ ಸುರೇಶ್ ರೈನಾ ಜತೆಗೆ ಇನ್‌ಸ್ಟಾಗ್ರಾಂ ಮಾತುಕತೆಯಲ್ಲಿ ತಮ್ಮ ಕನಸು ಹಂಚಿಕೊಂಡಿದ್ದರು. ಜತೆಗೆ ಮೈ ಡೇ ಇನ್ ಲಾಕ್‌ಡೌನ್ ಹೆಸರಿನಲ್ಲಿ ತಮ್ಮ ದಿನಚರಿವುಳ್ಳ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts