

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಪ್ರಾರಂಭವಾದ ಮೊದಲ ಪಂದ್ಯದಿಂದ ಇಂದಿನವರೆಗೆ ಎಲ್ಲ ಪಂದ್ಯಗಳು ಸಹ ಬಹಳ ರೋಚಕವಾಗಿ ಮೂಡಿಬರುತ್ತಿವೆ. ಟೂರ್ನಿ ಆರಂಭದಿಂದ ಒಂದು ಗೆಲುವನ್ನು ದಾಖಲಿಸದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿತು. ಜತೆಗೆ ಅಂಕಪಟ್ಟಿಯಲ್ಲಿ ಕೆಳಗೆ ಕುಸಿದುಹೋಗಿದ್ದ ಎಂಐ, ಒಂದೇ ಒಂದು ಪಂದ್ಯದಿಂದ ಮೇಲಕ್ಕೆ ಜಿಗಿದಿದೆ.
ಕಳೆದ ವರ್ಷವೇ ಗುಜರಾತ್ ಟೈಟನ್ಸ್ ಕೈಬಿಟ್ಟು ಮುಂಬೈ ಇಂಡಿಯನ್ಸ್ ಸೇರ್ಪಡೆಗೊಂಡಿದ್ದ ಹಾರ್ದಿಕ್ ಪಾಂಡ್ಯ, ನೇರವಾಗಿ ತಂಡದ ಕ್ಯಾಪ್ಟನ್ ಆಗಿ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದ ಹೆಸರಾಂತ ನಾಯಕ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಸಿದ ಪಾಂಡ್ಯ ವಿರುದ್ಧ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಫ್ಯಾನ್ಸ್ ಭಾರೀ ಆಕ್ರೋಶ, ಅಸಮಾಧಾನ ಹೊರಹಾಕಿದ್ದರು.
ಈ ವಿಷಯ ಐಪಿಎಲ್ ಆರಂಭಕ್ಕೂ ಮುನ್ನ ಹಾಗೂ ಆರಂಭದ ಬಳಿಕವೂ ಮುಂದುವರೆಯಿತು. ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂನಲ್ಲಿ ಹಾರ್ದಿಕ್ ವಿರುದ್ಧ ಘೋಷಣೆ ಕೂಗವುದು, ಛೀಮಾರಿ ಹಾಕುವುದನ್ನು ಮಾತ್ರ ಫ್ಯಾನ್ಸ್ ತಪ್ಪಿಸುತ್ತಿರಲಿಲ್ಲ. ಇದು ರೋಹಿತ್ಗೆ ಭಾರೀ ಬೇಸರವನ್ನು ತಂದೊಡ್ಡಿತ್ತು. ಈ ಅಪಸ್ವರಗಳ ಮಧ್ಯೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕೊಟ್ಟ ಹೇಳಿಕೆಯೊಂದು ಸದ್ಯ ರೋಹಿತ್ ಶರ್ಮಾರ ಅಭಿಮಾನಿಗಳ ಹೃದಯ ಗೆದ್ದಿದೆ.
"ರೋಹಿತ್ ಶರ್ಮಾ ಐಪಿಎಲ್ನ 10 ಟೀಮ್ಗಳಿಗೂ ಕ್ಯಾಪ್ಟನ್. ಯಾಕೆ ಅಂತ ಹೇಳ್ತೀನಿ. ಅದಕ್ಕೆ ಕಾರಣವೂ ಇದೆ. ಯಾಕಂದ್ರೆ, ಅವರು ಭಾರತ ತಂಡದ ನಾಯಕರಾಗಿದ್ದಾರೆ. ಇದೇ ಐಪಿಎಲ್ ತಂಡಗಳಿಂದ ಇಂಡಿಯಾ ಟಿ-20 ಸ್ಕ್ವಾಡ್ಗೆ ಅವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು" ಎಂದಿದ್ದಾರೆ. ಸದ್ಯ ರೈನಾ ಹೇಳಿಕೆಗೆ ಫಿದಾ ಆದ ರೋಹಿತ್ ಫ್ಯಾನ್ಸ್, ಹೌದು, ಹಿಟ್ ಮ್ಯಾನ್ ಎಂದೆಂದಿಗೂ ನಮ್ಮ ಕ್ಯಾಪ್ಟನ್ ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).