

ನವದೆಹಲಿ: ಪುರುಷರ ಡಬಲ್ಸ್ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ಅತ್ಯಂತ ಹಿರಿಯ ಆಟಗಾರನೆಂಬ ಸಾಧನೆಯ ಜತೆಗೆ ಆಸ್ಟ್ರೆಲಿಯನ್ ಓಪನ್ನಲ್ಲಿ ಡಬಲ್ಸ್ ಪ್ರಶಸ್ತಿ ಒಲಿಸಿಕೊಂಡ ಅನುಭವಿ ಟೆನಿಸ್ ಆಟಗಾರ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಈ ವೇಳೆ ಬೋಪಣ್ಣ, ಮೋದಿಗೆ ರ್‍ಯಾಕೆಟ್ ಉಡುಗೊರೆ ನೀಡಿದರು. ಪ್ರಧಾನಿ ಭೇಟಿಯಿಂದ ಇನ್ನಷ್ಟು ಸ್ಫೂರ್ತಿ ಪಡೆದುಕೊಂಡಿರುವೆ ಎಂದು 43 ವರ್ಷದ ಬೋಪಣ್ಣ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.