ಪ್ರೇಕ್ಷಕರು ನನ್ನ ಕೂದಲು, ಬಟ್ಟೆ ಬಗ್ಗೆ ಕಾಮೆಂಟ್​ ಮಾಡ್ತಾರೆ: ಚೆಸ್​ ಆಟಗಾರ್ತಿ ದಿವ್ಯಾ ದೇಶ್​ಮುಖ್​ ಬೇಸರ

chess web
Published on

ನವದೆಹಲಿ: ನೆದರ್ಲೆಂಡ್​ನ ವಿಜ್​ ಆನ್​ ಜೀಯಲ್ಲಿ ನಡೆದ ಟಾಟಾ ಸ್ಟೀಲ್​ ಮಾಸ್ಟರ್ಸ್​ ಟೂರ್ನಿಯ ವೇಳೆ ತನ್ನ ಕೂದಲು, ಬಟ್ಟೆಯ ಬಗ್ಗೆ ಕಾಮೆಂಟ್​ ಮಾಡುವ ಮೂಲಕ ಪ್ರೇಕ್ಷಕರು ಲಿಂಗ್​ಭೇದಭಾವದ ವರ್ತನೆ ತೋರಿದ್ದಾರೆ ಎಂದು ಭಾರತದ ಚೆಸ್​ ಆಟಗಾರ್ತಿ ದಿವ್ಯಾ ದೇಶ್​ಮುಖ್​ ಆರೋಪಿಸಿದ್ದಾರೆ.

ನಾಗ್ಪುರದ ಅಂತಾರಾಷ್ಟ್ರೀಯ ಮಾಸ್ಟರ್​ ಆಗಿರುವ 18 ವರ್ಷದ ದಿವ್ಯಾ, ಚೆಸ್​ ಪಂದ್ಯ ಆಡುವ ವೇಳೆ ತನಗೆ ಆದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚೆಸ್​ ಆಟದಲ್ಲಿ ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಪ್ರೇಕ್ಷಕರೂ ನಮ್ಮ ಆಟಕ್ಕಿಂತ ಕೂದಲು, ಬಟ್ಟೆ ಮತ್ತು ಇತರ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ಮಾತನಾಡಲು ಟೂರ್ನಿ ಮುಕ್ತಾಯವಾಗುವವರೆಗೆ ಕಾದೆ ಎಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಟೂರ್ನಿಯಲ್ಲಿ ಅವರು 4.5 ಅಂಕ ಕಲೆಹಾಕುವ ಮೂಲಕ 12ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದ್ದರು.

ಪುರುಷರನ್ನು ಅವರ ಆಟದ ಸಾಮರ್ಥ್ಯದಿಂದಲೇ ಗುರುತಿಸಲಾಗುತ್ತದೆ. ಆದರೆ ಮಹಿಳೆಯರು ಆಡುವಾಗ ಅವರ ಅಟಕ್ಕಿಂತ ಅವರನ್ನೇ ಗಮನಿಸಲಾಗುತ್ತದೆ. 18ನೇ ವಯಸ್ಸಿನಲ್ಲೇ ನಾನು ಸಾಕಷ್ಟು ಸ್ತ್ರಿದ್ವೇಷವನ್ನು ನೋಡಿರುವೆ. ಮಹಿಳೆಯರಿಗೂ ಸಮಾನ ಗೌರವ ಸಲ್ಲಬೇಕಾದ ಅಗತ್ಯವಿದೆ ಎಂದು ದಿವ್ಯಾ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net