More

    ಯಾರ ಜತೆ ಯಶ್ ಮುಂದಿನ ಸಿನಿಮಾ?

    ಬೆಂಗಳೂರು: ‘ಕೆಜಿಎಫ್ 2’ ಚಿತ್ರದ ಚಿತ್ರೀಕರಣ ಮುಗಿದು, ಬಿಡುಗಡೆಯ ದಿನಾಂಕ ಸಹ ಘೋಷಣೆಯಾಗಿದೆ. ಇಷ್ಟಾದರೂ, ಯಶ್ ಅಭಿನಯದ ಮುಂದಿನ ಚಿತ್ರ ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ‘ಕೆಜಿಎಫ್ 2’ ನಂತರ ಯಶ್​ಗೆ ಎಲ್ಲಾ ಭಾಷೆಯ ಚಿತ್ರರಂಗಗಳಿಂದಲೂ ಬೇಡಿಕೆ ಹೆಚ್ಚಿದ್ದು, ‘ಕೆಜಿಎಫ್’ ತರಹ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅವರು ನಟಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಶ್ ಅಭಿನಯದ ಮುಂದಿನ ಚಿತ್ರವನ್ನು ಯಾರು ನಿರ್ವಿುಸುತ್ತಿದ್ದಾರೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

    ಯಶ್ ಸ್ವಂತ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿ, ತಮ್ಮ ಮುಂದಿನ ಚಿತ್ರವನ್ನು ಆ ನಿರ್ಮಾಣ ಸಂಸ್ಥೆಯಡಿ ನಿರ್ವಿುಸುವ ಸಾಧ್ಯತೆ ಇದೆ ಎಂಬ ಸುದ್ದಿ ಇದ್ದೇ ಇದೆ. ಈ ಮಧ್ಯೆ, ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘83’ ಚಿತ್ರವನ್ನು ನಿರ್ವಿುಸಿರುವ ತೆಲುಗಿನ ವಿಷ್ಣು ಇಂದೂರಿ ನಿರ್ವಣದ ಹೊಸ ಚಿತ್ರದಲ್ಲಿ ಯಶ್ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಅಪ್ಪಳಿಸಿದೆ.

    ಈ ಚಿತ್ರ ಸಹ ಪ್ಯಾನ್ ಇಂಡಿಯಾ ಚಿತ್ರವಾಗಿರಲಿದ್ದು, ಈಗಾಗಲೇ ಯಶ್ ಮತ್ತು ವಿಷ್ಣು ನಡುವೆ ಹಲವು ಮೀಟಿಂಗ್​ಗಳಾಗಿವೆಯಂತೆ. ವಿಷ್ಣು ಬಳಿ ಒಂದು ಕಥೆ ಇದ್ದು, ಆ ಕಥೆ ಕೇಳಿ ಯಶ್ ಸಹ ಖುಷಿಯಾಗಿದ್ದಾರಂತೆ. ಇನ್ನು, ಈ ಕಥೆಯನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ತರುವ ಒಬ್ಬ ನಿರ್ದೇಶಕರ ಹುಡುಕಾಟ ನಡೆದಿದ್ದು, ಈಗಾಗಲೇ ಕೆಲವು ನಿರ್ದೇಶಕರ ಹತ್ತಿರ ಮಾತುಕತೆ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದಂತೆ. ಈ ಚಿತ್ರ ಇದೇ ವರ್ಷ ಪ್ರಾರಂಭವಾಗಲಿದ್ದು, ‘ಕೆಜಿಎಫ್ 2’ ಬಿಡುಗಡೆಯ ನಂತರ ಪ್ರಾರಂಭವಾಗುತ್ತದೋ ಅಥವಾ ಅದಕ್ಕೂ ಮುನ್ನವೇ ಪ್ರಾರಂಭವಾಗುತ್ತದೋ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಹಿಂದಿಯಲ್ಲೂ ಯಶ್ ಡಬ್

    ‘ಕೆಜಿಎಫ್ 2’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಹಿಂದಿ ಅವತರಣಿಕೆಗೆ ಸ್ವತಃ ಯಶ್ ಡಬ್ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ತಿಂಗಳೇ ಕೇಳಿ ಬಂದಿತ್ತು. ಇದೀಗ ಯಶ್ ಹಿಂದಿಯಲ್ಲಿ ಡಬ್ಬಿಂಗ್ ಮಾಡುವುದಕ್ಕೆ ಸೂಕ್ತ ತಯಾರಿ ನಡೆಸಿದ್ದು, ಸದ್ಯದಲ್ಲೇ ಡಬ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts