ಸುನಿ ಜನ್ಮದಿನಕ್ಕೆ ‘ರಾಬಿನ್​ ಹುಡ್​’ ಸಿನಿಮಾ ಘೋಷಣೆ; ಪುಷ್ಕರ್​ ಹೆಗಲಿಗೆ ನಿರ್ಮಾಣದ ಹೊಣೆ

collage (5)
Published on

ಬೆಂಗಳೂರು: ಸಿಂಪಲ್​ ಸುನಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಆ ನಿಮಿತ್ತ ಅವರ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಸ್ನೇಹಿತರು, ಆಪ್ತರು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ನಡುವೆ ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾ ತಂಡಗಳಿಂದಲೂ ಪೋಸ್ಟರ್​ ಉಡುಗೊರೆ ಸಿಕ್ಕಿದೆ. ಇದರ ಜತೆಗೆ ‘ರಾಬಿನ್​ ಹುಡ್​’ ಶೀರ್ಷಿಕೆಯ ಹೊಸ ಸಿನಿಮಾವೊಂದನ್ನೂ ಘೋಷಣೆ ಮಾಡಿದ್ದಾರೆ ಸುನಿ.

ವಿಶೇಷ ಏನೆಂದರೆ, ರಾಬಿನ್​ ಹುಡ್ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನ್. ಈಗಾಗಲೇ ಸುನಿ ನಿರ್ದೇಶನದ ‘ಅವತಾರ್ ಪುರುಷ’ ಚಿತ್ರಕ್ಕೂ ಪುಷ್ಕರ್​ ಹಣ ಹೂಡುತ್ತಿದ್ದಾರೆ. ಹಾಗಾದರೆ ಈ ಚಿತ್ರಕ್ಕೆ ನಾಯಕ ಯಾರು? ಸದ್ಯಕ್ಕೆ ಆ ವಿಚಾರವನ್ನು ಗೌಪ್ಯವಾಗಿಟ್ಟಿರುವ ನಿರ್ದೇಶಕರು, ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಿದ್ದಾರಂತೆ.

ಕೆಲ ಮೂಲಗಳ ಮಾಹಿತಿ ಪ್ರಕಾರ, ಹೊಸ ನಟನನ್ನು ಪರಿಚಯಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದು, ಆ ನಟನ್ಯಾರು ಎಂಬುದೂ ಶೀಘ್ರದಲ್ಲಿ ಗೊತ್ತಾಗಲಿದೆ. 2021ರಲ್ಲಿ ಈ ಸಿನಿಮಾ ಸೆಟ್ಟೇರಲಿದ್ದು, ಸ್ಕ್ರಿಪ್ಟಿಂಗ್​ ಕೆಲಸಗಳಲ್ಲಿಯೂ ಸುನಿ ತೊಡಗಿಸಿಕೊಂಡಿದ್ದಾರೆ. ಸದ್ಯ ಗಣೇಶ್ ಜತೆಗೆ ಸಖತ್​ ಸಿನಿಮಾ ಸೇರಿ ನಟ ಚೇತನ್​ಗೂ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಸುನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net