More

    VIDEO | ಹಣ ಕೊಡಿ ಎಂದು ಬೆದರಿಸಿದ ಕಳ್ಳ ವಾಪಸ್​​ ಬರಿಗೈಯಲ್ಲಿ ಹೋಗಿದ್ದೇಕೆ?; ವಿಡಿಯೋ ವೈರಲ್​​

    ಅಮೆರಿಕಾ: ಕಳ್ಳತನಕ್ಕೆ ಎಂದು ಸಲೂನ್​​ಗೆ ಪ್ರವೇಶಿಸಿದ ದರೋಡೆಕೋರ ಸ್ಥಳದಲ್ಲಿದ್ದ ಜನರಿಗೆ ಕೈಯಲ್ಲಿದ್ದ ಆಯುಧ ತೋರಿಸಿ, ಹಣ ಕೊಡಿ ಎಂದು ಬೆದರಿಸಿದ್ದಾನೆ. ಇದಕ್ಕೆ ಯಾರೊಬ್ಬರೂ ಪ್ರತಿಕ್ರಿಯೆ ನೀಡದೆ ಇರುವ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಇದನ್ನೂ ಓದಿ: ಕೆನಡಾದಲ್ಲಿ ಖಲಿಸ್ತಾನಿಗಳ ರ‍್ಯಾಲಿಯ ಕಾವು ಆರಿಸಿದ ಭಾರತೀಯರು! ಮಾಡಿದ್ದೇನು ಗೊತ್ತಾ?

    ಅಮೆರಿಕಾದ ಅಟ್ಲಾಂಟಾದಲ್ಲಿರುವ ಸಲೂನ್‌ಗೆ ನುಗ್ಗಿದ ದರೋಡೆಕೋರ, ಒಳಗೆ ಕುಳಿತ್ತಿದ್ದ ಗ್ರಾಹಕರು ಮತ್ತು ಸಿಬ್ಬಂದಿಗೆ ನಿಮ್ಮ ಬಳಿಯಿರುವ ಹಣವನ್ನು ಈ ಕೂಡಲೇ ನೀಡಬೇಕು ಎಂದು ಕೈಯಲ್ಲಿದ್ದ ಆಯುಧವನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ. ಆದ್ರೆ, ಕಳ್ಳನ ಯಾವ ಮಾತಿಗೂ ಹೆದರದ ಜನರು, ಆತನಿಗೆ ಒಂದು ರೂಪಾಯಿ ನೀಡದಿರುವುದು ನೆಟ್ಟಿಗರ ಅಶ್ಚರ್ಯಕ್ಕೆ ಕಾರಣವಾಗಿದೆ. ಈ ಘಟನೆಯ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ಸರ್ಕಾರದ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು

    ಸಲೂನ್​​ ಒಳಗೆ ಬಂದ ಕಳ್ಳ, “ಎಲ್ಲರೂ ಇಲ್ಲಿ ಕೇಳಿ, ನಿಮ್ಮ ಬಳಿ ಏನೇನಿದೆ ಎಲ್ಲವನ್ನೂ ನನಗೆ ಕೊಡಿ” ಎಂದು ಹೇಳಿದ್ದಾನೆ. “ಹಣ ಎಲ್ಲಿದೆ ಹೇಳು” ಎಂದು ಸಿಬ್ಬಂದಿಗೂ ಗದರಿಸಿದ್ದಾನೆ. ಆದ್ರೆ, ದರೋಡೆಕೋರನ ಈ ಮಾತುಗಳಿಗೆ ಕಿಂಚಿತ್ತು ಸ್ಪಂದಿಸದ ಗ್ರಾಹಕರು ಮತ್ತು ಸಿಬ್ಬಂದಿ ಮೂಕಪ್ರೇಕ್ಷಕರಂತೆ ಆತನನ್ನು ದಿಟ್ಟಿಸುತ್ತ ನೋಡಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾದ ಕಳ್ಳನ್ನು ಸ್ಥಳದಿಂದ ಬರಿಗೈಯಲ್ಲಿ ಹಿಂತಿರುಗಿದ್ದಾನೆ,(ಏಜೆನ್ಸೀಸ್).

    ಮಾನ್ಸೂನ್ ಆರೋಗ್ಯ ಸಲಹೆಗಳನ್ನು ಪಾಲಿಸಿ, ಮಳೆಗಾಲದ ಅನಾರೋಗ್ಯಕ್ಕೆ ಹೇಳಿ ಗುಡ್​ ಬೈ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts