

ಕಾರವಾರ: ಶಿರೂರು ಗುಡ್ಡ ಕುಸಿತದಿಂದ ಅಂಕೋಲಾ-ಕುಮಟಾ ನಡುವೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ಬಂದಾಗಿ ವಾರ ಕಳೆದಿದೆ.
ಅಗಸೂರು ತಿಂಗಳೆಬೈಲ್ ಮಾದನಗೇರಿ ಮಾರ್ಗದಲ್ಲಿ ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ರಸ್ತೆ ನಿರಂತರ ವಾಹನ ಓಡಾಟದಿಂದ ಕೊಚ್ಚೆ ರಾಡಿಯಾಗಿದ್ದು, ಭಾರಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ಲಾರಿಗಳು, ಬಸ್ ಗಳು ಮಾರ್ಗದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿವೆ. ಇದರಿಂದ ಟ್ರಾಫಿಕ್ ಜಾಂ ಆಗುತ್ತಿದೆ. ಹಾಗಾಗಿ ಮಂಗಳವಾರ ಭಾರಿ ವಾಹನ ಬಿಟ್ಟಿಲ್ಲ.