ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, 9 ಜನರಿಗೆ ಗಂಭೀರ ಗಾಯ/ Road accident

accident-15
Published on

Road accident :ಕುಡಿದ ಮತ್ತಿನಲ್ಲಿ ಟ್ರಕ್​ ಚಾಲಕನೊಬ್ಬ ವಾಹನ ಚಲಾಯಿಸುವಾಗ ನಿಯಂತ್ರಣ ತಪ್ಪಿ, ಎದುರು ಬಂದಂತಹ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ (ಜುಲೈ18)ರಂದು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ರುಖಾಡ್ ಗ್ರಾಮದ ಬಳಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಇಬ್ಬರ ಸಾವು:

ಅಪಘಾತದ ಬಳಿಕ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಂತಕುಮಾರ್ ಹರ್ಡಿಯಾ (55) ಮತ್ತು ರಾಮ್‌ಕಿಶೋರ್ ಬರ್ಮೈಯಾ (50) ಮೃತರು. ಟ್ರಕ್​ ಚಾಲಕ ಅಜಿತ್​ ಯಾದವ್​ನ್ನು ಬಂಧಿಸಲಾಗಿದೆ ಎಂದು ಕುರೈ ಪೊಲೀಸ್​ ಠಾಣೆಯ ಉಸ್ತುವಾರಿ ಕೃಪಾಲ್​ ಸಿಂಗ್​ ಟೆಕಮ್​​ ತಿಳಿಸಿದ್ದಾರೆ.

ಅಪಘಾತದಲ್ಲಿ 9 ಜನರಿಗೆ ಗಾಯ:

ಘಟನೆ ವೇಳೆ ಅನೇಕರಿಗೆ ಗಂಭೀರ ಗಾಯವಾಗಿದ್ದು, ತಕ್ಷಣವೇ ಆಂಬುಲೆನ್ಸ್​ ಸೇವೆಯ ಮೂಲಕ ಅವರನ್ನು ಛಾಪಾರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ನಾಗ್ಪುರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net