5 ವರ್ಷವೂ ಸಿದ್ದರಾಮಯ್ಯ ಸಿಎಂ

18BLH2
Published on

ಬೈಲಹೊಂಗಲ: ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಆ ಚರ್ಚೆ ಈಗ ಮುಗಿದ ಅಧ್ಯಾಯವಾಗಿದ್ದು, ಇದನ್ನು ಸ್ವತ@ ಸಿದ್ದರಾಮಯ್ಯ ಅವರೇ ಸ್ಪಷ್ಟಡಿಸಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ 5.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪಥವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿ ಜಿಲ್ಲೆಗೆ 300 ಬಸ್​: ರಾಜ್ಯಕ್ಕೆ 1000 ಬಸ್​ ನೀಡಲಾಗಿದ್ದು, ಬೆಳಗಾವಿ ಜಿಲ್ಲೆಗೆ 300 ಬಸ್​ ಒದಗಿಸಲು ಟೆಂಡರ್​ ಕರೆಯಲಾಗಿದೆ. ಜತೆಗೆ ಬೆಲಹೊಂಗಲ ಸಾರಿಗೆ ಟಕಕ್ಕೆ 21 ಹೊಸ್​ ಬಸ್​, ನಿಲ್ದಾಣದ ಆವರಣದ ಅಭಿವದ್ಧಿಗೆ 3 ಕೋಟಿ ರೂ. ಮಂಜೂರು ಮಾಡಲಾಗಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಇಲ್ಲಿ ಭಾರಿ ವಾಹನ ಚಾಲನಾಪಥ ನಿರ್ಮಿಸಲಾಗುವುದು ಎಂದರು.

ರಾಜ್ಯ ಸರ್ಕಾರದಿಂದ ಹೆಚ್ಚು ಅನುದಾನ: ಯಲ್ಲಮ್ಮನ ಗುಡ್ಡದ ಅಭಿವದ್ಧಿಗೆ ಕೇಂದ್ರ ಸರ್ಕಾರ 100 ಕೋಟಿ ರೂ., ರಾಜ್ಯ ಸರ್ಕಾರ 150 ಕೋಟಿ ರೂ. ಒದಗಿಸಿದೆ. ಪ್ರತಿವರ್ಷ ಐದು ರಾಜ್ಯಗಳ ಕೋಟ್ಯಂತರ ಭಕ್ತರು ಆಗಮಿಸುವ ಈ ೇತ್ರದ ಅಭಿವದ್ಧಿಗೆ ನೀಲಿನೆ ತಯಾರಿಸಲಾಗಿದೆ. ಸರ್ಕಾರವೂ ಅನುಮೋದನೆ ನೀಡಿದೆ. ಪ್ರವಾಸೋದ್ಯಮ, ೇತ್ರದ ಪ್ರಾಧಿಕಾರ ರಚಿಸಲಾಗಿದೆ ಎಂದರು.

ಸಾಲಭಾರ ಹೆಚ್ಚಿಸಿದ ಬಿಜೆಪಿ: ಅಧಿಕಾರವಧಿಯಲ್ಲಿ ಮಾಡಿದ 1 ಲ ಕೋಟಿ ರೂ. ಸಾಲಭಾರ ಸರ್ಕಾರಕ್ಕೆ ಹೊರೆಯಾಗಿದೆ. ಹಣವಿಲ್ಲದೆ ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಗುತ್ತಿಗೆದಾರರ ಬಿಲ್​ ಬಾಕಿ ಇಟ್ಟಿದ್ದಾರೆ ಎಂದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯತೆ ವಹಿಸಿದ್ದರು. ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಪುರಸಭೆ ಅಧ್ಯ ವಿಜಯ ಬೋಳನ್ನವರ, ಉಪಾಧ್ಯ ಬುಡ್ಡೇಸಾಬ ಶಿರಸಂಗಿ, ಅಪರ ಸಾರಿಗೆ ಆಯುಕ್ತ ಬಿ.ಪಿ.ಉಮಾಶಂಕರ, ಕೆ.ಟಿ.ಹಾಲಸ್ವಾಮಿ, ಸಾರಿಗೆ ಮತ್ತು ರಸ್ತೆ ಸುರತೆ ಆಯುಕ್ತ ಯೋಗೇಶ ಎ.ಎಂ., ಜಂಟಿ ಸಾರಿಗೆ ಆಯುಕ್ತೆ ಎಂ.ಪಿ.ಓಂಕಾರೇಶ್ವರಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯಾನಂದ ನರಸಣ್ಣವರ, ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ಮಹೇಶ ತಿರಕನ್ನವರ, ಗ್ಯಾರಂಟಿ ಯೋಜನೆ ಸ್ಥಳಿಯಾಧ್ಯ ಡಾ.ಮಹಾಂತೇಶ ಕಳ್ಳಿಬಡ್ಡಿ, ಉಮೇಶ ಬೋಳೆತ್ತಿನ, ಪಿಎಸ್​ಐ ಎ್​.ವೆ.ಮಲ್ಲೂರ, ಶಂಕರಗೌಡ ಪಾಟೀಲ, ರಮೇಶ ಪರಂಡಿ, ಅಮಿರಬಿ ಬಾಗವಾನ್​, ಹಸನ್​ ಗೊರವನಕೊಳ್ಳ, ಅಶೋಕ ಭದ್ರಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net