ಭೀಕರ ರಸ್ತೆ ಅಪಘಾತ: ಟ್ರ್ಯಾಕ್ಟರ್ ಮತ್ತು 108 ಆಂಬುಲೆನ್ಸ್ ಪರಸ್ಪರ ಡಿಕ್ಕಿ

Ambulance accident 1
Published on

ವಿಜಯಪುರ: ಇಲ್ಲಿನ ಆಕಾಶವಾಣಿ ಕೇಂದ್ರದ ಸಮೀಪ ಶುಕ್ರವಾರ ಮುಂಜಾನೆ 4 ಗಂಟೆಗೆ ಟ್ರ್ಯಾಕ್ಟರ್ ಮತ್ತು ಆಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಕೊಲ್ಹಾರ ತಾಲೂಕಿನ ತೆಲಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ 108 ಅಂಬುಲೆನ್ಸ್ ಬಸವನ ಬಾಗೇವಾಡಿ ತಾಲೂಕಿನ ರೆಬಿನಾಳದಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ರೋಗಿಯೊಬ್ಬರನ್ನು ಸಾಗಿಸುವಾಗ ನಡೆದ ದುರ್ಘಟನೆ ಇದು. ದುರ್ಘಟನೆಯಿಂದಾಗಿ 108 ಚಾಲಕ ಶ್ರೀಶೈಲ, ಆರೋಗ್ಯ ಸಹಾಯಕಿ ತುಳಸಿ (30) ಇವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net