ಬಸ್​-ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ: 8 ಮಕ್ಕಳೂ ಸೇರಿ 11 ಮಂದಿ ದುರ್ಮರಣ, ಮೂವರ ಸ್ಥಿತಿ ಗಂಭೀರ | Road Accident

Road Accident
Published on

ಜೈಪುರ: ಪ್ಯಾಸೆಂಜರ್​ ಬಸ್​ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತ ( Road Accident ) ದಲ್ಲಿ 8 ಮಕ್ಕಳು ಸೇರಿದಂತೆ 11 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಬರಿ ನಗರದಲ್ಲಿ ಶನಿವಾರ (ಅ.19) ರಾತ್ರಿ ನಡೆದಿದೆ.

ಮೃತರನ್ನು ಅಸ್ಮಾ (14), ಇರ್ಫಾನ್ ಅಲಿಯಾಸ್ ಬಂಟಿ (38), ಸಲ್ಮಾನ್ (8), ಸಾಕಿರ್ (6), ಡ್ಯಾನಿಶ್ (10), ಅಜಾನ್ (5), ಜರೀನಾ (35), ಆಶಿಯಾನಾ (10), ಸುಖಿ (7) ಮತ್ತು ಸನಿಫ್ (9) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ 32 ವರ್ಷದ ಜೂಲಿ ಎಂಬಾಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟರು. ಧರ್ಮೇಂದ್ರ (38), ಸಾಜಿದ್ (10) ಮತ್ತು ಪ್ರವೀಣ್ (32) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತಕ್ಕೂ ಮುನ್ನ ನಹ್ನು ಮತ್ತು ಜಹೀರ್ ಅವರ ಕುಟುಂಬ ವಿವಾಹಪೂರ್ಹ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಹಿಂದಿರುಗುತ್ತಿತ್ತು ಎಂದು ಬರಿ ನಗರದ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​ ಶಿವ ಲಹರಿ ಮೀನಾ ತಿಳಿಸಿದ್ದಾರೆ. ಅಪಘಾತಕ್ಕೀಡಾದ ಎರಡೂ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಪಘಾತದ ಕಾರಣವನ್ನು ತನಿಖೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಬಸ್ಸಿನ ಚಾಲಕ ಮತ್ತು ಕಂಡಕ್ಟರ್‌ಗೂ ಗಾಯಗಳಾಗಿವೆ. ಇಂದು (ಅ.20) ನಿಗದಿಯಾಗಿರುವ ಮರಣೋತ್ತರ ಪರೀಕ್ಷೆಗಾಗಿ ಎಲ್ಲ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net