

ನವದೆಹಲಿ: ರೈಲ್ವೆ ಪ್ಲಾಟ್ಫಾರಂಗಳಲ್ಲಿ ಇರುವ ರೈಲ್ವೆ ಸ್ಟಾಲ್ಗಳಲ್ಲಿ ಇನ್ನು ಮುಂದೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಬೆಡ್ ರೋಲ್ ಕಿಟ್ ಸೇರಿ ಕರೊನಾ ವೈರಸ್ ತಡೆಗೆ ಅಗತ್ಯವಿರುವ ಎಲ್ಲ ವಸ್ತುಗಳು ಲಭ್ಯ ಇರಲಿವೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ರೈಲ್ವೆ ಮಂಡಳಿ ಪ್ರಕಟಿಸಿರುವ ಸೂಚನೆ ಅನ್ವಯ ರೈಲ್ವೆ ಸ್ಟಾಲ್ಗಳು ಕರೊನಾ ವೈರಸ್ ತಡೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲಿವೆ. ಬಹುತೇಕ ರೈಲ್ವೆ ಸ್ಟಾಲ್ಗಳನ್ನು ಖಾಸಗಿಯವರು ನಿರ್ವಹಿಸುತ್ತಿದ್ದಾರೆ. ಇಲ್ಲಿ ನೈರ್ಮಲಕ್ಕೆ ಸಂಬಂಧಿಸಿದ ಸಾಮಗ್ರಿಗಳು, ಪುಸ್ತಕಗಳು, ಔಷಧಗಳು ಮತ್ತು ಪ್ಯಾಕ್ಡ್ ಫುಡ್ ಗಳನ್ನು ಮಾರಾಟ ಮಾಡುತ್ತಾರೆ.
ದೂರ ಪ್ರಯಾಣದ ರೈಲುಗಳಲ್ಲಿ ಬೆಡ್ ರೋಲ್ಗಳನ್ನು ಈ ಮೊದಲು ಒದಗಿಸಲಾಗುತ್ತಿತ್ತು. ಇತ್ತೀಚೆಗೆ ಅದನ್ನು ನಿಲ್ಲಿಸಿರುವ ಕಾರಣ ಪ್ರಯಾಣಿಕರೇ ಅವನ್ನು ತರಬೇಕಾಗಿದೆ. ಅಕಸ್ಮಾತ್ ತರುವುದನ್ನು ಮರೆತರೆ ಸ್ಟಾಲ್ಗಳಿಂದ ಬೆಡ್ರೋಲ್ ಕಿಟ್ ಖರೀದಿಸಬಹುದು. ಅದರನಲ್ಲಿ ಒಂದು ಪಿಲ್ಲೋ, ಅದರ ಕವರ್, ಬ್ಲಾಂಕೆಟ್ಸ್, ಫೇಸ್ ಟವೆಲ್ ಇದೆ. ರೈಲು ಪ್ರಯಾಣಿಕರು ಮನೆಯಿಂದ ಹೊರಟು ಬರುವಾಗ ಒಂದೊಮ್ಮೆ ಕರೊನಾ ವೈರಸ್ ತಡೆಗೆ ಸಂಬಂಧಿಸಿದ ಅಗತ್ಯವಸ್ತುಗಳನ್ನು ಮರೆತು ಬಂದರೆ ಅಂಥವರು ಈ ಸ್ಟಾಲ್ಗಳಿಂದು ಅವುಗಳನ್ನು ಖರೀದಿಸಿ ಬಳಸಬಹುದಾಗಿದೆ. (ಏಜೆನ್ಸೀಸ್)