'ನಿಮಗೆ ಕುಟುಂಬವೇ ಇಲ್ಲ': ಪ್ರಧಾನಿ ಮೋದಿ ವಿರುದ್ಧ ಲಾಲೂ ವಾಗ್ದಾಳಿ

lalu
Published on: 

ನವದೆಹಲಿ: ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲೂ ಯಾದವ್ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ವೈಯಕ್ತಿಕ ಜೀವನ ಮತ್ತು ಧರ್ಮದ ಬಗ್ಗೆ ತೀಕ್ಷ್ಣವಾದ ಟೀಕೆಗಳ ಮಳೆಗರೆದರು.

ಬಿಹಾರದಲ್ಲಿ ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಲಾಲೂ, "ಮೋದಿ ವಂಶಾಡಳಿತದ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಸರಿ, ನೀವು ಹೇಳಿ, ಮೋದಿ ಜೀ, ನಿಮಗೆ ಏಕೆ ಮಗುವಾಗಲಿಲ್ಲ? ನಿಮಗೆ ಕುಟುಂಬವಿಲ್ಲ" ಎಂದು ಯಾದವ್ ಅವರು ರಾಜವಂಶದ ರಾಜಕೀಯದ ಬಗ್ಗೆ ಪ್ರಧಾನಿಯವರ ನಿಲುವನ್ನು ಪ್ರಶ್ನಿಸಿದರು.

ತನ್ನ ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾದ ಲಾಲೂ , "ಹೇ ಸಹೋದರ, ಹೇಳು ನಿಮ್ಮ ಕುಟುಂಬದಲ್ಲಿ ಏಕೆ ಮಗು ಇಲ್ಲ? ಅನೇಕ ಜನಮಕ್ಕಳನ್ನು ಹೊಂದಿ, ಸಂಸಾರ ಸಾಗಿಸುತ್ತಾರೆ. ಕುಟುಂಬ, ಮಕ್ಕಳಿಗಾಗಿ ಜಗಳವಾಡುತ್ತಿದ್ದಾರೆ. ನೀವು ಏಕೆ ಅಂತಹವರಲ್ಲಿ ಇಲ್ಲ. ಈಗಲೂ ಒಂದು ಕುಟುಂಬವನ್ನು ಹೊಂದಿರಿ" ಎಂದು ಸಲಹೆ ನೀಡಿದರು.

ಇನ್ನು ಧರ್ಮದ ವಿಷಯವನ್ನೂ ಪ್ರಸ್ತಾಪಿಸಿದ ಲಾಲೂ, ಮೋದಿ ಹಿಂದು ಸಹ ಅಲ್ಲ ಎಂದು ಪ್ರತಿಪಾದಿಸಿದರು. "ಯಾವೊಬ್ಬ ಹಿಂದುವು ತನ್ನ ತಾಯಿ ಸತ್ತಾಗ, ಅವರ ಮಗ ಕೂದಲು ಬೋಳಿಸುತ್ತಾನೆ, ನಿಮ್ಮ ತಾಯಿ ಸತ್ತಾಗ ನೀವು (ಮೋದಿ) ಏಕೆ ಬೋಳಿಸಿಕೊಳ್ಳಲಿಲ್ಲ?" ಎಂದು ಪ್ರಶ್ನಿಸಿದ್ದಾರೆ,

ಬಿಹಾರದ ಮಾಜಿ ಮುಖ್ಯಮಂತ್ರಿಯ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ, ಬೆಂಬಲಿಗರು ಮತ್ತು ವಿಮರ್ಶಕರು ರಾಜಕೀಯ ಭಾಷಣದಲ್ಲಿ ಇಂತಹ ವೈಯಕ್ತಿಕ ದಾಳಿಯ ಸೂಕ್ತತೆಯ ಬಗ್ಗೆ ಬಿಸಿ ಚರ್ಚೆಯಲ್ಲಿ ತೊಡಗಿದ್ದಾರೆ.