ರಿಯಾನ್​​​​​ ಪರಾಗ್​​​​​ ವಿಚಿತ್ರವಾಗಿ ಎಸೆದ ಚೆಂಡನ್ನು ನೋಬಾಲ್​ ಎಂದಿದ್ದೇಕೆ ಅಂಪೈರ್​! ICC ನಿಯಮ ಏನು ಹೇಳುತ್ತೆ? Riyan Parag

Riyan Parag

ನವದೆಹಲಿ: ಟೀಮ್​ ಇಂಡಿಯಾ ( Team India ) ಮತ್ತು ಬಾಂಗ್ಲಾದೇಶ ( Bangladesh ) ನಡುವಿನ ಎರಡನೇ ಟಿ20 ಪಂದ್ಯ ಬುಧವಾರ ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ 86 ರನ್‌ಗಳ ಭರ್ಜರಿ ಜಯ ಸಾಧಿಸಿತು.

ಈ ಪಂದ್ಯದ ಬಳಿಕ ಉತ್ತಮ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ನಿತೀಶ್ ಅವರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಪ್ರತಿಭೆಯ ಅನಾವರಣ ಮಾಡಿದರು. ಆದರೆ, ಇದೇ ಪಂದ್ಯದಲ್ಲಿ ಅಪರೂಪದ ಘಟನೆಯೊಂದು ನಡೆಯಿತು. ಇದಕ್ಕೆ ಸಂಬಂಧಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಲ್​ ರೌಂಡರ್ ರಿಯಾನ್ ಪರಾಗ್ ( Riyan Parag ) ಅತಿಯಾಗಿ ಪ್ರತಿಕ್ರಿಯಿಸುತ್ತಿರುವಂತೆ ಕಾಣುತ್ತದೆ. ಕೊಂಚ ವಿಭಿನ್ನವಾಗಿ ಬೌಲಿಂಗ್ ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು. ಬಾಂಗ್ಲಾದೇಶದ 11ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಪರಾಗ್ ಅವರು 11ನೇ ಓವರ್‌ ಬೌಲಿಂಗ್ ಮಾಡಲು ಬಂದರು. ಈ ವೇಳೆ ಕ್ರೀಸ್​ನಲ್ಲಿದ್ದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಹಮ್ಮದುಲ್ಲಾರನ್ನು ವಿಚಿತ್ರ ಬೌಲಿಂಗ್​ ಮೂಲಕ ಕನ್ಫ್ಯೂಸ್​ ಮಾಡಲು ಮುಂದಾದರು.

11ನೇ ಓವರ್​ನ 4ನೇ ಚೆಂಡು ಎಸೆದ ರಿಯಾನ್​ ಪರಾಗ್​, ಭಾರತದ ಮಾಜಿ ಬ್ಯಾಟರ್ ಕೇದಾರ್ ಜಾಧವ್ ಅವರ ವೈಡ್ ಆಕ್ಷನ್ ಅನ್ನು ನೆನಪಿಸುವ ವಿಚಿತ್ರವಾದ ಸ್ಲಿಂಗ್ ಆಕ್ಷನ್ ಅನ್ನು ಪ್ರಯತ್ನಿಸಿದರು. ಆದರೆ, ರಿಯಾನ್​ ಪರಾಗ್, ಪಿಚ್ ಟ್ರಾಮ್‌ಲೈನ್‌ನ ಹೊರಗೆ ಹೆಜ್ಜೆ ಹಾಕಿದ್ದರಿಂದ ಅವರ ಪ್ರಯತ್ನಕ್ಕೆ ಹಿನ್ನಡೆಯಾಯಿತು. ಏಕೆಂದರೆ, ಅಂಪೈರ್​ ಆ ಎಸೆತವನ್ನು ನೋ-ಬಾಲ್ ಎಂದು ಹೇಳಿದರು.

ಇದನ್ನೂ ಓದಿ: ಪೊಲೀಸರಿಗೆ ತಲೆನೋವಾದ 15 ವರ್ಷದ ಹುಡುಗಿ! 3ನೇ ಬಾರಿ 12 ವರ್ಷದ ಬಾಲಕನ ಜತೆ ಎಸ್ಕೇಪ್​ | Girl Escape

ಅಂದಹಾಗೆ ಇಂಗ್ಲೆಂಡ್‌ನ ಪ್ರಸಿದ್ಧ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ರೂಪಿಸಿರುವ ಕ್ರಿಕೆಟ್ ನಿಯಮಗಳ ಕಾನೂನು 21.5 ಪ್ರಕಾರ, ಬೌಲರ್‌ ಚೆಂಡನ್ನು ಎಸೆಯುವಾಗ ಆತನ ಹಿಂಬದಿಯ ಕಾಲು ರಿಟರ್ನ್ ಕ್ರೀಸ್‌ನೊಳಗೆ ಇಳಿಯಬೇಕು ಮತ್ತು ಮುಟ್ಟಬಾರದು ಮತ್ತು ಪಾಪಿಂಗ್ ಕ್ರೀಸ್‌ನ ಹಿಂದೆಯೇ ಇರಬೇಕು. ಈ ಷರತ್ತುಗಳನ್ನು ಪೂರೈಸಿದಿದ್ದರೆ ಮತ್ತು ಅಂಪೈರ್‌ಗೆ ಸರಿ ಅನಿಸದಿದ್ದರೆ ನೋ ಬಾಲ್ ಎಂದು ಸೂಚಿಸಬಹುದು.

ಈ ನಿಯಮದ ಪ್ರಕಾರ, ರಿಯಾನ್ ಪರಾಗ್‌ ಅವರ ಹಿಂಬದಿಯ ಕಾಲು ಬಿಳಿ ಟ್ರಾಮ್‌ಲೈನ್‌ನ ಹೊರಗೆ ಎಡಕ್ಕೆ ಬಿದ್ದ ತಕ್ಷಣ ಅದನ್ನು ನೋ-ಬಾಲ್ ಎಂದು ಪರಿಗಣಿಸಲಾಯಿತು. ವಾಸ್ತವವಾಗಿ ರಿಯಾನ್ ಪರಾಗ್‌ ಅವರ ಪಾದ ಟ್ರಾಮ್‌ಲೈನ್‌ನ ಹೊರಗೆ ಮಾತ್ರವಲ್ಲದೆ ಒಟ್ಟಾರೆಯಾಗಿ ಪಿಚ್‌ನ ಹೊರಗಡೆ ಇತ್ತು. ಅಂಪೈರ್ ತಮ್ಮ ನಿರ್ಧಾರವನ್ನು ಖಚಿತಪಡಿಸುವ ಮುನ್ನ ಒಂದೆರಡು ಬಾರಿ ಪರಿಶೀಲಿಸಿದರು ಮತ್ತು ಅಂತಿಮವಾಗಿ ಅದನ್ನು ನೋ-ಬಾಲ್ ಎಂದು ಘೋಷಿಸಿದರು. ಈ ಪಂದ್ಯದಲ್ಲಿ ಪರಾಗ್ 15 ರನ್ ಗಳಿಸಿ ಒಂದು ವಿಕೆಟ್ ಪಡೆದರು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಯುವ ಆಟಗಾರ​ ನಿತೀಶ್​ ಕುಮಾರ್​ ರೆಡ್ಡಿ (74 ರನ್​, 34 ಎಸೆತ, 4 ಬೌಂಡರಿ, 7 ಸಿಕ್ಸರ್​, 23ಕ್ಕೆ 2 ವಿಕೆಟ್​) ಆಲ್ರೌಂಡ್​ ಆಟ ಹಾಗೂ ಎಡಗೈ ಬ್ಯಾಟರ್​ ರಿಂಕು ಸಿಂಗ್​ (53 ರನ್​, 29 ಎಸೆತ, 5 ಬೌಂಡರಿ, 3 ಸಿಕ್ಸರ್​) ಬಿರುಸಿನ ಅರ್ಧಶತಕದ ನೆರವಿನಿಂದ ರನ್​ಮಳೆ ಹರಿಸಿದ ಭಾರತ ತಂಡ ಎರಡನೇ ಟಿ20ಯಲ್ಲಿ ಪ್ರವಾಸಿ ಬಾಂಗ್ಲಾದೇಶ ಎದುರು 86 ರನ್​ಗಳ ಬೃಹತ್​ ಗೆಲುವು ದಾಖಲಿಸಿದೆ. ಇದರೊಂದಿಗೆ ಸೂರ್ಯಕುಮಾರ್​ ಬಳಗ ಕೊನೇ ಪಂದ್ಯ ಬಾಕಿಯಿರುವಂತೆಯೇ 2-0ಯಿಂದ ಸರಣಿ ಗೆದ್ದುಕೊಂಡಿದೆ. ಈ ಮೂಲಕ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಕೋಚ್​ ಆಗಿ ತವರಿನ ಮೈದಾನದಲ್ಲಿ ಜಯದ ಸಂಭ್ರಮ ಕಂಡಿದ್ದಾರೆ. ಇದು 2022ರ ಬಳಿಕ ಟೀಮ್​ ಇಂಡಿಯಾಗೆ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವಾಗಿದೆ. ಜತೆಗೆ ತವರಿನ ಸತತ 16ನೇ ಟಿ20 ಸರಣಿಯಲ್ಲಿ ಸೋಲರಿಯದ ಅಜೇಯ ಸಾಧನೆ ಮಾಡಿದೆ. (ಏಜೆನ್ಸೀಸ್​)

ಎಷ್ಟು ಪ್ರಮಾಣದಲ್ಲಿ ಉಪ್ಪು ಸೇವಿಸಿದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್? ಇಲ್ಲಿದೆ ಉಪಯುಕ್ತ ಮಾಹಿತಿ… Salt ​

ಜೀವಿಗಳಿಲ್ಲದ ಈ ನದಿಗೆ ಇಳಿದ್ರೆ ಏನಾಗುತ್ತೆ ಗೊತ್ತಾ? ಭೂಮಿ ಮೇಲಿನ ರಕ್ತದ ನದಿಯ ಭಯಾನಕ ರಹಸ್ಯ | Rio Tinto

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…