ಕೇಂಬ್ರಿಡ್ಜ್ ಯುನಿವರ್ಸಿಟಿಯಲ್ಲಿ ‘ನಾನು ಪ್ರಧಾನಿಯಾಗಿ ಬಂದಿಲ್ಲ, ಹಿಂದೂ ಆಗಿ ಬಂದಿದ್ದೇನೆ’ ಎಂದ ರಿಷಿ ಸುನಕ್!

rishi sunak morari bapu
Published on

ನವದೆಹಲಿ: ಭಾರತೀಯ ಸ್ವಾತಂತ್ರ್ಯ ದಿನದಂದು ಮಂಗಳವಾರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಖ್ಯಾತ ರಾಮಾಯಣ ಕಥಾಕಾರ ’ಮೊರಾರಿ ಬಾಪು’ ಅವರನ್ನು ಭೇಟಿಯಾದ ವೇಳೆ ಬ್ರಿಟನ್ ಪ್ರಧಾನಿ ರಿಶಿ ಸುನಕ್, “ನಾನು ಪ್ರಧಾನ ಮಂತ್ರಿಯಾಗಿ ಅಲ್ಲ, ಆದರೆ ಹಿಂದೂ ಆಗಿ ಬಂದಿದ್ದೇನೆ” ಎಂದು ಹೇಳಿದರು.

ಸುನಾಕ್ ತನ್ನನ್ನು ತಾನು “ಬ್ರಿಟಿಷ್ ಪ್ರಜೆ” ಹಾಗೂ “ಹಿಂದೂ” ಎಂದು ಕರೆದುಕೊಳ್ಳಲು ಹೆಮ್ಮೆ ಆಗುತ್ತದೆ ಎಂದಿದ್ದಾರೆ. ಏಕೆಂದರೆ ಅವರು ಜೀಸಸ್ ಕಾಲೇಜಿನಲ್ಲಿ ಭಾರತೀಯ ಮೂಲದ ಜನರ ಸಭೆಯನ್ನುದ್ದೇಶಿಸಿ ಮಾತನಾಡಿ, ಈ ಕಾಲೇಜು ಮೊದಲಬಾರಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಮೊರಾರಿ ಬಾಪು ಅವರ 921ನೇ ವಾಚನಗೋಷ್ಠಿಯನ್ನು ‘ಮಾನಸ್ ವಿಶ್ವವಿದ್ಯಾಲಯ್’ ಎಂದು ಗುರುತಿಸುವ ಸಲುವಾಗಿ ಜೀಸಸ್ ಕಾಲೇಜು ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಪತ್ರಿಕಾ ಬಿಡುಗಡೆ ಒಂದು ತಿಳಿಸಿದೆ.

ಸುನಾಕ್ “ಜೈ ಸಿಯಾ ರಾಮ್” ಎನ್ನುತ್ತಾ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ತಮ್ಮ ಭಾಷಣದಲ್ಲಿ “ಪ್ರಧಾನ ಮಂತ್ರಿಯಾಗಿರುವುದು ಒಂದು ದೊಡ್ಡ ಗೌರವ. ಆದರೆ ಇದು ಸುಲಭದ ಕೆಲಸವಲ್ಲ. ಮಾಡಲು ಕಷ್ಟಕರವಾದ ನಿರ್ಧಾರಗಳಿದ್ದು, ಆಯ್ಕೆಗಳು ಕಠಿಣವಾಗಿದೆ, ಆದರೆ ನಮ್ಮ ಧರ್ಮ ನಮ್ಮ ದೇಶಕ್ಕೆ ” ನಾನು ಸಾಧ್ಯವಾದಷ್ಟು ಸೇವೆ ಸಲ್ಲಿಸಲು ಧೈರ್ಯ, ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ನೀಡುತ್ತದೆ” ಎಂದಿದ್ದಾರೆ. ಬ್ರಿಟನ್‍ನ ಅಧಿಕೃತ ಪ್ರಧಾನಿ ನಿವಾಸ “10 ಡೌನಿಂಗ್ ಸ್ಟ್ರೀಟ್ “ನಲ್ಲಿ ಚಿನ್ನದ ಗಣೇಶನ ವಿಗ್ರಹ ತಮ್ಮ ಮೇಜಿನ ಮೇಲೆ ಇರುವುದಾಗಿ ಈ ಸಂದರ್ಭದಲ್ಲಿ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net