VIDEO| ಅವನನ್ನು ನೋಡಿ ಚೆಂಡೆಸಿ ನಂಗ್ಯಾಕೆ…ಪಂತ್​ರನ್ನು ಸುಖಾಸುಮ್ಮನೆ ಕೆಣಕಿದ ಬಾಂಗ್ಲಾ ಆಟಗಾರ

Rishabh Das

ಚೆನ್ನೈ: ಚೆಪಾಕ್​ ಅಂಗಳದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಪ್ರವಾಸಿ ತಂಡದ ದಾಳಿಗೆ ಆತಿಥೇಯರು ದಿಟ್ಟ ಪ್ರತಿರೋಧ ತೋರಿದ್ದು, ಭಾರತದ ಪರ ಆರ್. ಅಶ್ವಿನ್​ ಶತಕ ಸಿಡಿಸಿ ಮಿಂಚಿದ್ದಾರೆ. ಆಲ್ರೌಂಡರ್​ ರವೀಂದ್ರ ಜಡೇಜಾ ಕೂಡ ಶತಕದ ಅಂಚಿನಲ್ಲಿದ್ದು, ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡವು 6 ವಿಕೆಟ್​ ನಷ್ಟಕ್ಕೆ 339 ರನ್​ಗಳನ್ನು ಪೇರಿಸಿದ್ದು, ಮೊದಲ ಸೆಷನ್​ನಲ್ಲೇ ಆಟಗಾರರ ನಡುವೆ ವಾಕ್ಸಮರ ನಡೆದಿದೆ.

ಟಾಸ್​ ಗೆದ್ದ ಬಾಂಗ್ಲಾ ತಂಡವು ಮೊದಲು ಆತಿಥೇಯರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತು. ಉತ್ತಮ ಆರಂಭದ ನಿರೀಕ್ಷೆಯಲ್ಲಿ ಕಣಕ್ಕಿಳಿದ ಭಾರತದ ಬ್ಯಾಟರ್​ಗಳನ್ನು ಇನ್ನಿಲ್ಲದಂತೆ ಕಾಡಿದ ಬಾಂಗ್ಲಾ ವೇಗಿ ಹಸನ್​ ಮಹ್ಮುದ್​ ಬ್ಯಾಟ್ಸ್​ಮನ್​ಗಳು ಬಂದಷ್ಟೇ ವೇಗದಲ್ಲೇ ಪೆವಿಲಿಯನ್​ ದಾರಿ ತೋರಿದರು. ಈ ವೇಳೆ ಬ್ಯಾಟಿಂಗ್​​ಗೆ ಇಳಿದಿ ವಿಕೆಟ್​ ಕೀಪರ್​ ರಿಷಭ್​ ಪಂತ್ ಆರಂಭಿಕ ಆಘಾತವನ್ನು ಲೆಕ್ಕಿಸದರೆ​ ಕೆಲಕಾಲ ಬಾಂಗ್ಲಾ ಬೌಲರ್​ಗಳನ್ನು ಬೆಂಡೆತ್ತಿದ್ದರು.

ಇದನ್ನೂ ಓದಿ: ಕಾಂಗ್ರೆಸ್​-ಪಾಕಿಸ್ತಾನದ ಅಜೆಂಡಾ ಒಂದೇ, ಮೋದಿ ಸರ್ಕಾರ ಇರೋವರೆಗೂ ಇದು ಸಾಧ್ಯವಿಲ್ಲ: ಅಮಿತ್​ ಷಾ

ಇತ್ತ ರಿಷಭ್​ ಪಂತ್​ ಅಬ್ಬರದಿಂದ ಕಂಗೆಟ್ಟ ಬಾಂಗ್ಲಾ ಆಟಗಾರರು ಸುಖಾಸುಮ್ಮನೆ ಕೆಣಕಲು ಮುಂದಾಗಿದ್ದಾರೆ. ಬಾಂಗ್ಲಾ ತಂಡದ ಆಟಗಾರ ಲಿಟನ್​ ದಾಸ್​ ರಿಷಭ್​ರನ್ನು ಗುರಿಯಾಗಿಸಿ ಬಾಲ್​ಅನ್ನು ಎಸೆದಿದ್ದಾರೆ. ಕ್ರೀಸ್​ನಲ್ಲಿರುವ ತನ್ನನ್ನು ಗುರಿಯಾಗಿಸಿ ಚೆಂಡೆಸೆಯುತ್ತಿರುವುದನ್ನು ಗಮನಿಸಿದ ರಿಷಭ್, ಲಿಟ್ಟನ್ ದಾಸ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ವಾಕ್ಸಮರ ನಡೆದಿದ್ದು, ಇದು ಸ್ಟಂಪ್​ ಮೈಕ್​ನಲ್ಲಿ ಸೆರೆಯಾಗಿದೆ.

ಅವನನ್ನು ನೋಡಿ ಚೆಂಡೆಸಿ ನಂಗ್ಯಾಕೆ ಎಸೆಯುತ್ತಿದ್ದೀಯಾ ಎಂದು ರಿಷಭ್ ಪಂತ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಲಿಟನ್​ ದಾಸ್​ ವಿಕೆಟ್ ಮುಂದಿದೆ ಅದಕ್ಕೆ ಎಸೆಯುತಿದ್ದೀನಿ ಎಂದು ಹೇಳಿದ್ದಾರೆ. ಈ ಇಬ್ಬರು ಆಟಗಾರರ ನಡುವಿನ ಮಾತುಕತೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಬಾಂಗ್ಲಾ ಇನ್ನಿಂಗ್ಸ್​​ ವೇಳೆ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ಇದೆ.

Share This Article

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…

ನೀವಿದನ್ನು ನಿತ್ಯವೂ ಚಾಚೂ ತಪ್ಪದೇ ಅನುಸರಿಸಿದರೆ ನೀವು ಖಂಡಿತ ಶ್ರೀಮಂತರಾಗ್ತೀರಿ! Rich Person

ಇಂದು ಪ್ರತಿಯೊಬ್ಬರು ಶ್ರೀಮಂತರಾಗಲು ( Rich Person ) ಬಯಸುತ್ತಾರೆ. ತಾವು ದುಡಿದ ಹಣವನ್ನು ಸರಿಯಾದ…

ಈ ಸಲಹೆಗಳನ್ನು ಪಾಲಿಸಿದ್ರೆ..ಮಾತ್ರೆ ನುಂಗದೆ ಕ್ಷಣ ಮಾತ್ರದಲ್ಲೇ ತಲೆ ನೋವು ಮಾಯ! Headache Health Tips

 ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ತಲೆನೋವು ( Headache Health Tips ) ಸಾಮಾನ್ಯವಾಗಿದೆ. ಈ…