ಇವರೇ ನೋಡಿ ಟೀಮ್​ ಇಂಡಿಯಾ ಪರ ಕಣಕ್ಕಿಳಿದ ಮೊದಲ ಸಕ್ರಿಯ ಬಿಜೆಪಿ ನಾಯಕ

Team India
ಭಾರತ ಕ್ರಿಕೆಟ್​ ತಂಡ
Published on

ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ಬಿಗಿ ಬೌಲಿಂಗ್​ ದಾಳಿಗೆ ಆತಿತೇಯರು ದಿಟ್ಟ ಪ್ರತಿರೋಧ ತೋರಿದ್ದು, ಬೃಹತ್​ ಸ್ಕೋರ್​ನತ್ತ ದಾಪುಗಾಲಿಟ್ಟಿದ್ದಾರೆ. ಆಲ್ರೌಂಡರ್​ಗಳಾದ ರವೀಂದ್ ಜಡೇಜಾ ಹಾಗೂ ಆರ್​. ಅಶ್ವಿನ್​ ಕ್ರೀಸ್​ನಲ್ಲಿದ್ದು, ಭಾರತಕ್ಕೆ ಚೇತರಿಕೆ ನೀಡಿದ್ದಾರೆ. ಆದರೆ, ರವೀಂದ್ರ ಜಡೇಜಾ ಮಾತ್ರ ಬ್ಯಾಟಿಂಗ್​ ಮಾತ್ರವಲ್ಲದೇ ಈ ಒಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕ್ರೀಡಾ ವಲಯದಲ್ಲಿ ಸಖತ್​ ಸೌಂಡ್​ ಮಾಡುತ್ತಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್​ 11 ಪ್ರಕಟವಾಗುತ್ತಿದ್ದಂರೆ ರವೀಂದ್ರ ಜಡೇಹಜಾ ಎಲ್ಲರ ಗಮನ ಸೆಳದರು. ಏಕೆಂದರೆ ಸಕ್ರಿಯ ಬಿಜೆಪಿ ಸದಸ್ಯರೊಬ್ಬರು ಭಾರತದ ಪರ ಟೆಸ್ಟ್​ ಪಂದ್ಯವಾಡಿದ ಮೊಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವಿಶಿಷ್ಟ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕ್ರೀಡಾ ವಲಯದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

ಈ ಹಿಂದೆ ಸೆಪ್ಟೆಂಬರ್ 3 ರಂದು ಜಡೇಜಾ ಅವರ ಪತ್ನಿ ರಿವಾಬಾ ಸಾಮಾಜಿಕ ಜಾಲತಾಣದಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ತಮ್ಮ ಪತಿ ರವೀಂದ್ರ ಬಿಜೆಪಿ ಸೇರಿರುವುದಾಗಿ ಫೋಟೋವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅವರು ಟೆಸ್ಟ್​​ ಮಾದರಿಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಇದೀಗ ಭಾರತದ ಪರ ಆಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಪಡೆದು 3,000 ರನ್​ ಗಳಿಸಿರುವ ಅಗ್ರ 10 ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕೂಡ ಸ್ಥಾನ ಪಡೆದಿದ್ದಾರೆ. ಪ್ರಸ್ತುತ, ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿರುವ ಸಾಧನೆಯನ್ನು ಜಡೇಜಾಗೆ ಆರು ವಿಕೆಟ್​ಗಳ ಅವಶ್ಯಕತೆಯಿದ್ದು, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಇದು ಸಾಧ್ಯವಾಗಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net