ನವದೆಹಲಿ: ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಈಗ ಫುಲ್ ಜೋಶ್ನಲ್ಲಿದ್ದಾರೆ. ಟಿ20 ವಿಶ್ವಕಪ್ ಸಂಭ್ರಮಾಚರಣೆ ಮುಗಿದಿದ್ದು, ಭವಿಷ್ಯದ ಯೋಜನೆಗಳಲ್ಲಿ ಮಗ್ನರಾಗಿದ್ದಾರೆ. ರಸ್ತೆ ಅಪಘಾತದಿಂದ ಎರಡು ವರ್ಷಗಳ ಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದ ಈ ಸ್ಟಾರ್ ಆಟಗಾರ, ಇದೀಗ ಮತ್ತೆ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ಐಪಿಎಲ್- 2024ರಲ್ಲಿ ಕೀಪರ್ ಮತ್ತು ಬ್ಯಾಟರ್ ಆಗಿ ಮಿಂಚಿದ ಪಂತ್, ಆ ಬಳಿಕ ನಡೆದ ಟಿ20 ವಿಶ್ವಕಪ್‌ನಲ್ಲಿ ಪ್ರಮುಖ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರಿದರು.
ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ತಮ್ಮದೇಯಾದ ಕೊಡುಗೆಯನ್ನು ನೀಡಿದ ಪಂತ್, ಮೆಗಾಟೂರ್ನಮೆಂಟ್ ಮುಗಿಸಿ ತವರಿಗೆ ಮರಳಿದರು. ಬಳಿಕ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಕೂಡ ಭಾಗವಹಿಸಿದರು.
ಇದೀಗ ಪಂತ್ ಶ್ರೀಲಂಕಾ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಏಕದಿನ ಹಾಗೂ ಟಿ-20 ತಂಡಕ್ಕೆ ಆಯ್ಕೆಯಾಗಿರುವ ಪಂತ್, ಅಲ್ಲೂ ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ. ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು, ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಲಾಭವನ್ನು ಪಡೆಯಲು ನೋಡುತ್ತಿದ್ದಾರೆ. ನೂತನ ಕೋಚ್ ಗಂಭೀರ್ ಅವರು ಕೂಡ ಎಡಗೈ ಆಟಗಾರ ಆಗಿರುವುದರಿಂದ ಪಂತ್ ಅವರ ಬ್ಯಾಟಿಂಗ್ ತಂತ್ರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ಇದೇ ವೇಳೆ ಪಂತ್ ಅವರು ತಮ್ಮ ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದಿದ್ದಾರೆ. ಆದರೆ, ಪಂತ್ ಕೇಳಿದ ಸಹಾಯ ತನಗಾಗಿ ಅಲ್ಲ. ಬದಲಾಗಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹೋಗುವ ಭಾರತದ ಕ್ರೀಡಾಪಟುಗಳ ಬಗ್ಗೆ ಎಂಬುದು ಗಮನಾರ್ಹ.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳು ತಯಾರಿ ನಡೆಸುತ್ತಿದ್ದಾರೆ. ಈ ಬಾರಿ ದೇಶಕ್ಕೆ ಇನ್ನಷ್ಟು ಪದಕಗಳನ್ನು ನೀಡಲು ಉತ್ಸುಕರಾಗಿದ್ದಾರೆ. ಹಲವು ಚಿನ್ನದ ಪದಕಗಳನ್ನು ಗೆದ್ದು ದೇಶದ ಘನತೆ ಹೆಚ್ಚಿಸುವ ಹಂಬಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಿ, ಉತ್ತೇಜಿಸುವಂತೆ ಪಂತ್ ಕೇಳಿಕೊಂಡಿದ್ದಾರೆ. ದೇಶಕ್ಕಾಗಿ ಶ್ರಮಿಸುತ್ತಿರುವ ಕ್ರೀಡಾಪಟುಗಳ ಬೆಂಬಲಕ್ಕೆ ನಿಂತು ಈ ಹೋರಾಟಕ್ಕೆ ಎಲ್ಲರು ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ನಮ್ಮ ಕ್ರೀಡಾಪಟುಗಳನ್ನು ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ನಿಮ್ಮ ಪ್ರೋತ್ಸಾಹ ನಮ್ಮ ಕ್ರೀಡಾಪಟುಗಳಿಗೆ ಧೈರ್ಯ ತುಂಬುತ್ತದೆ ಎಂದು ಹೇಳಿದ್ದಾರೆ.
May the tricolor fly high at Paris
Wishing our Indian Olympic athletes all the best for Paris 2024. 🇮🇳#RP17 pic.twitter.com/aeqsFu0r4w— Rishabh Pant (@RishabhPant17) July 22, 2024
ಅಂದಹಾಗೆ ಪಂತ್‌ಗಿಂತ ಮೊದಲೇ ಅಗ್ರ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಒಲಿಂಪಿಕ್ಸ್‌ಗೆ ಹೋಗುವ ಭಾರತೀಯ ಆಟಗಾರರನ್ನು ಬೆಂಬಲಿಸಿದರು. ನಾವೆಲ್ಲರೂ ಒಗ್ಗೂಡಿ ಅವರಿಗಾಗಿ ಆಸರೆಯಾಗೋಣ ಎಂದು ಕರೆ ನೀಡಿದರು. (ಏಜೆನ್ಸೀಸ್)
ಪ್ರತಿ ಶನಿವಾರದಂದೇ 7 ಬಾರಿ ಯುವಕನಿಗೆ ಹಾವು ಕಚ್ಚಿದ್ದೇಕೆ? ಕೊನೆಗೂ ಬಯಲಾಯ್ತು ಸ್ಫೋಟಕ ಸತ್ಯ
ಆ ಒಂದು ರಿಸ್ಕ್ ತೆಗೆದುಕೊಳ್ಳಲು ಗೌತಿಗೆ ಹೆದರಿಕೆ! ಬಿಸಿಸಿಐ ಬೆಂಬಲವಿದ್ರು ಗಂಭೀರ್ಗೆ ಕಾಡುತ್ತಿರುವ ಭಯವೇನು?
ಬ್ಲೌಸ್ಪೀಸ್ ಖರೀದಿ ನೆಪದಲ್ಲಿ ಚಿನ್ನಾಭರಣ ಕಳವು: ಬುರ್ಖಾ ಧರಿಸಿ 10 ಲಕ್ಷ ರೂಪಾಯಿ ಮೌಲ್ಯದ ಆಭರಣ ದೋಚಿದ ಮಹಿಳೆ