ಸೆಂಚುರಿ ಸ್ಟಾರ್​ ಪಂತ್ ಎಡವಟ್ಟು! ಹ್ಯಾರಿ ಬ್ರೂಕ್​​ ಐವತ್ತು; ಯಾರ ತೆಕ್ಕೆಗೆ ಮೊದಲ ಟೆಸ್ಟ್​? | Rishabh Pant

ವಿಜಯವಾಣಿ (96)
Published on

Rishabh Pant: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ಜೂ.20) ಲೀಡ್ಸ್‌ನ ಹೆಡಿಂಗ್ಲಿನಲ್ಲಿ ಆರಂಭಗೊಂಡಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಟೀಮ್ ಇಂಡಿಯಾ ನೀಡಿರುವ 471 ರನ್ ಗುರಿಯನ್ನು ಬೆನ್ನತ್ತಿರುವ ಇಂಗ್ಲೆಂಡ್​ಗೆ ಸ್ಟಾರ್​ ಬ್ಯಾಟರ್​ಗಳ ವಿಕೆಟ್​ ಪತನವಾಗಿರುವುದು ದೊಡ್ಡ ಆಘಾತ ತಂದೊಡ್ಡಿದೆ. ಈ ಮಧ್ಯೆ ಟೀಮ್ ಇಂಡಿಯಾ ಉಪನಾಯಕ ಮಾಡಿದ ಎಡವಟ್ಟು ಇದೀಗ ಹೊಸ ವಿವಾದಕ್ಕೆ ಕಾರಣವಾದಂತಿದೆ.

ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ 3ನೇ ದಿನದಂದು ಇಂಗ್ಲೆಂಡ್ ವಿರುದ್ಧ ಹ್ಯಾರಿ ಬ್ರೂಕ್ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಶತಕವೀರ ಓಲಿ ಪೋಪ್ ಮತ್ತು ಕ್ಯಾಪ್ಟನ್​ ಬೆನ್ ಸ್ಟೋಕ್ಸ್ ಅವರ ವಿಕೆಟ್‌ಗಳನ್ನು ಕಳೆದುಕೊಂಡ ಇಂಗ್ಲೆಂಡ್ 75 ಓವರ್‌ಗಳಲ್ಲಿ 316/5 ತಲುಪಿತು. ಈ ವೇಳೆ ಬೌಲಿಂಗ್​ನಲ್ಲಿ ಕಮಾಲ್​ ಮಾಡಿದ ಟೀಮ್ ಇಂಡಿಯಾ ವೇಗಿಗಳಾದ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಮುಖ್ಯ ವಿಕೆಟ್​ ಕಬಳಿಸಿದರು.

ಪಂತ್​ ಎಡವಟ್ಟು!

ಅಂಪೈರ್​ ಬಳಿ ಕೆಲ ಸಮಯ ಮಾತನಾಡಿದ ರಿಷಭ್ ಪಂತ್​, ಬಾಲ್​ ಬದಲಿಸುವಂತೆ ಕೇಳಿದರು. ಇದಕ್ಕೆ ಒಪ್ಪದ ಆನ್​-ಫೀಲ್ಡ್​ ಅಂಪೈರ್​, ಬದಲಿಸುವ ಮಾತನ್ನು ತಳ್ಳಿಹಾಕಿದರು. ಇದರಿಂದ ಕೆರಳಿದ ಪಂತ್​, ತನ್ನ ಕೈಯಲ್ಲಿದ್ದ ಬಾಲ್​ ಅನ್ನು ಕೋಪದಲ್ಲಿ ಅಂಪೈರ್ ಕಡೆ ಎಸೆದ ದೃಶ್ಯ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ. ಇದು ಚರ್ಚೆಗೂ ಕಾರಣವಾಗಿದೆ.

ಮೊದಲ ಟೆಸ್ಟ್​ನಲ್ಲೇ ಮೂರು ಶತಕಗಳು

ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಕ ಶುಭಮನ್ ಗಿಲ್ (147), ಉಪನಾಯಕ ರಿಷಭ್ ಪಂತ್ (134) ಮತ್ತು ಯಶಸ್ವಿ ಜೈಸ್ವಾಲ್ (101) ರನ್‌ಗಳನ್ನು ಸಿಡಿಸುವ ಮೂಲಕ ಭರ್ಜರಿ ಶತಕದಾಟ ಪ್ರದರ್ಶಿಸಿದರು. ಇದು ತಂಡದ ಒಟ್ಟು ಮೊತ್ತವನ್ನು 471 ರನ್​ಗೆ ಕೊಂಡೊಯ್ಯಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net