

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಬಡಾ ಎರ್ಮಾಳ್ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೈಕ್‌ಗಳ ನಡುವ ಡಿಕ್ಕಿ ಸಂಭವಿಸಿ ಸವಾರರು ಗಾಯಗೊಂಡಿದ್ದಾರೆ. ಎಲ್ಲೂರು ಕೆಮ್ಮುಂಡೇಲುವಿನ ಅಕ್ಷಯ ಕುಮಾರ್ ಹಾಗೂ ಮೊಹಮದ್ ಕೈಫ್ ಗಾಯಗೊಂಡವರು. ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್‌ಗಳು ಜಖಂಗೊಂಡಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.