ತಂದೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು 1400 ಕಿಮೀ ಪ್ರಯಾಣ ... ದೆಹಲಿಯಿಂದ ಮುಂಬೈಗೆ ಬೈರೋಡ್ ಹೊರಟ ರಿದ್ದೀಮಾ

Rishi and Riddhima Final
Published on

ಸುಮಾರು ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್‌ನ ಜನಪ್ರಿಯ ನಟ ರಿಷಿ ಕಪೂರ್ ಗುರುವಾರ ಬೆಳಿಗ್ಗೆ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ರಾತ್ರಿ ನಡೆಯಲಿದ್ದು, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು 1400 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದಾರೆ ರಿಷಿ ಕಪೂರ್ ಮಗಳು ರಿದ್ದೀಮಾ.

್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ರಿದ್ದೀಮಾ, ದೆಹಲಿಯಲ್ಲಿ ನೆಲೆಸಿದ್ದಾರೆ. ಕೊನೆಯ ಕ್ಷಣದಲ್ಲಿ ಅವರನ್ನು ನೋಡಲಾಗಲಿಲ್ಲ, ಕೊನೆಯ ಪಕ್ಷ ಅವರ ಅಂತಿಮ ಸಂಸ್ಕಾರದಲ್ಲಾದರೂ ಭಾಗವಹಿಸನೇಕು ಎಂದರೆ ಅದಕ್ಕೆ ಲಾಕ್‌ಡೌನ್ ಅಡ್ಡಗಾಲು ಹಾಕಿದೆ. ಲಾಕ್‌ಡೌನ್ ಇರುವುದರಿಂದ ಮುಂಬೈ ್ಲೈಟ್‌ಗಳೆಲ್ಲಾ ರದ್ದಾಗಿವೆ. ಬೇರೆ ದಾರಿಯಿಲ್ಲದೆ, ರಸ್ತೆಯ ಮೂಲಕವೇ ಮುಂಬೈಗೆ ಹೊರಟಿದ್ದಾರೆ ರಿದ್ದೀಮಾ.

ದೆಹಲಿ ಮತ್ತು ಮುಂಬೈಗೆ ನಡುವೆ 1400 ಕಿಲೋಮೀಟರ್ ಅಂತರವಿದ್ದು, ಕಾರಿನಲ್ಲೇ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ರಿದ್ದೀಮಾ. ಬೆಳಿಗ್ಗೆ ದೆಹಲಿ ಪೊಲೀಸರಿಂದ ವಿಶೇಷ ಪಾಸ್ ಪಡೆದಿರುವ ರಿದ್ದೀಮಾ, ಮುಂಬೈನತ್ತ ಹೊರಟಿದ್ದಾರೆ. ಅವರು ಮುಂಬೈ ತಲುಪಿದ ನಂತರ ರಿಷಿ ಕಪೂರ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net