ಸೋಮಾರಿ, ಆಟಕ್ಕೆ ಬದ್ಧವಾಗಿಲ್ಲ! ಕ್ಯಾಪ್ಟನ್ ಪ್ರದರ್ಶನ ತೋರದ ರೋಹಿತ್ ಶರ್ಮ ವಿರುದ್ಧ ಮಾಜಿ ಕ್ರಿಕೆಟಿಗ ಟೀಕೆ | Rohit Sharma

ವಿಜಯವಾಣಿ - 2024-12-27T102800.811
Published on

Rohit Sharma: ಇಂದು (ಡಿ.27) ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಅಖಾಡಕ್ಕಿಳಿದ ಟೀಮ್ ಇಂಡಿಯಾ, ಆರಂಭಿಕ ಹಂತದಲ್ಲೇ ಸ್ಟಾರ್​ ಬ್ಯಾಟರ್​ಗಳ ವಿಕೆಟ್ ಕಳೆದುಕೊಂಡಿರುವುದು ಇದೀಗ ಮಾಜಿ ಕ್ರಿಕೆಟಿಗರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದೆ.

ಆಸೀಸ್​ ವಿರುದ್ಧ ಓಪನಿಂಗ್ ಬಂದ ರೋಹಿತ್ ಶರ್ಮ ಆರಂಭಿಕ ಹಂತದಲ್ಲೇ ರನ್ ಗಳಿಸಲು ಪರದಾಡಿದ್ದು, ಪ್ಯಾಟ್​ ಕಮ್ಮಿನ್ಸ್​ ಅವರ ಓವರ್​ನಲ್ಲಿ ಕೇವಲ 3 ರನ್​ಗೆ ಔಟ್​ ಆಗಿ ಪೆವಿಲಿಯನ್​ ಹಾದಿ ಹಿಡಿದರು. ನಾಲ್ಕನೇ ಟೆಸ್ಟ್​ನ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮ ತೋರಿದ ಸೋಮಾರಿತನವೇ ಇಂದು ಅವರ ಕಳಪೆ ಪ್ರದರ್ಶನಕ್ಕೆ ಕಾರಣ ಎಂದು ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್, ಹಿರಿಯ ಆಟಗಾರ ರಿಕ್ಕಿ ಪಾಂಟಿಂಗ್ ಟೀಕಿಸಿದ್ದಾರೆ.

ನಿಜಕ್ಕೂ ವಿಚಿತ್ರ

"ಇಲ್ಲಿ ರೋಹಿತ್​ ಸೋಮಾರಿಯಾಗಿದ್ದಾರೆ ಮತ್ತು ಸ್ವಿಚ್ ಆನ್ ಆಗಲಿಲ್ಲ. ಅವರು ಆಡಿದ ಶಾಟ್ ನಿಜಕ್ಕೂ ವಿಚಿತ್ರವಾಗಿತ್ತು. ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದಲೂ ರೋಹಿತ್​ ಅತ್ಯುತ್ತಮ ಹೂಕರ್ ಮತ್ತು ಪುಲ್ಲರ್‌ಗಳಲ್ಲಿ ನಿಸ್ಸೀಮರಾದ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಆದರೆ ಸದ್ಯಕ್ಕೆ ಆ ಮಾತು ಇಲ್ಲಿಲ್ಲ. ಅವರು ಆಟಕ್ಕೆ ಬದ್ಧರಾಗಿಲ್ಲ, ಆಕ್ರಮಣಕಾರಿ ಬ್ಯಾಟಿಂಗ್​ ಮತ್ತು ಬಾಲ್​ನ ಬಲ ನೀಡಿ ಬಾರಿಸುವತ್ತ ಅವರು ನೋಡುತ್ತಿಲ್ಲ" ಎಂದು ಪಾಂಟಿಂಗ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net