More

    ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್

    ಬೆಂಗಳೂರು: ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಸಂಗೀತ ನಿರ್ದೇಶಕ ಮತ್ತು ಪರಿಸರವಾದಿ ರಿಕ್ಕಿ ಕೇಜ್. ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಟ್ಟಿದ್ದಾರೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ದಿನ ಅಂದರೆ ಆಗಸ್ಟ್14ರಂದು ಈ ವಿಶೆಷ ವೀಡಿಯೋ ಬಿಡುಗಡೆ ಮಾಡಲಾಗಿದೆ.

    ವಿಶೇಷ ಅಂದರೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬ್ಬೆ ರೋಡ್ ಸ್ಟುಡಿಯೋಸ್​ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಕೇವಲ 3 ಗಂಟೆ ಸಮಯದಲ್ಲಿಯೇ, 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ. ಈಗಾಗಲೇ ಸಾಮಾಜಿಕ ಜಾಲತಣಾದಲ್ಲಿ ವೈರಲ್ ಆಗಿದ್ದು ಸಾಕಷ್ಟು ವೀವ್ಸ್ ಪಡೆದುಕೊಂಡಿದ್ದು, ಜನರಿಂದ ಮೆಚ್ಚುಗೆ ಪಡೆದುಕೊಂಡಿದೆ.

    ಈ ಬಗ್ಗೆ ರಿಕ್ಕಿ ಕೇಜ್ ‘ರಾಷ್ಟ್ರಗೀತೆ ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ ಟಚ್ ಕೊಡಲಾಗಿದೆ. ಈ ರಾಷ್ಟ್ರಗೀತೆ ಪ್ರೆಸೆಂಟ್ ಮಾಡಲು ನಾನು ಕಾತುರನಾಗಿದ್ದೆ. ಲಂಡನ್ ಮೂಲದ ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾದ ಸಹಯೋಗದಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಲಾಗಿದೆ. ಈ ಹಿಂದೆ ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ 100 ಮಂದಿ ಸಿಬೋನಿಕ್ ಮ್ಯೂಸಿಷಿಯನ್ಸ್ ಕೈಚಳಕದಿಂದ ಭಾರತದ ರಾಷ್ಟ್ರಗೀತೆ ಸಿದ್ಧವಾಗಿದೆ’ ಎಂದು ಸಂತಸ ಹಂಚಿಕೊಂಡರು. ವಿಶೇಷ ಎಂದರೆ ಈ ವೀಡಿಯೊಗೆ ಯಾವುದೇ ಕಾಪಿರೈಟ್ ಇರುವುದಿಲ್ಲ. ಯಾರೂ ಬೇಕಾದರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳಬಹುದು. ಆದರೆ, ರಾಷ್ಟ್ರಗೀತೆಗೆ ಯಾವುದೇ ರೀತಿ ಅಪಮಾನ ಆಗಬಾರದು ಎನ್ನುತ್ತಾರೆ ರಿಕ್ಕಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts