ನೆಲ್ಯಾಡಿ: ರಸ್ತೆಗೆ ಬಿದ್ದಿದ್ದ ಮರವೊಂದನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಸಂದರ್ಭ ಜೆಸಿಬಿಗೆ ರಿಕ್ಷಾವೊಂದು ಗುದ್ದಿ ಪ್ರಯಾಣಿಕರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ. ರಿಕ್ಷಾ ಚಾಲಕ ಉದಯ, ಪುತ್ತಿಗೆ ನಿವಾಸಿ ಪೊಡಿಯ ಹಾಗೂ ಅಡ್ಡ ಹೊಳೆಯ ಗಿರಿಯಪ್ಪ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಬುಧವಾರ ಸಂಜೆ ಭಾರಿ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಬಿದ್ದಿತ್ತು. ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸುವ ಸಂದರ್ಭ ಗುಂಡ್ಯದಿಂದ ಬಂದಿರುವ ರಿಕ್ಷಾ ಜೆಸಿಬಿಗೆ ಡಿಕ್ಕಿಯಾಗಿದೆ. ಗಾಯಾಳು ಪೊಡಿಯ ಅವರನ್ನು ಖಾಸಗಿ ಆಸ್ಪತ್ರೆಗೆ ಹಾಗೂ ಗಿರಿಯಪ್ಪ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.