ಯಕ್ಷಗಾನ ಹಿರಿಯ ಕಲಾವಿದ ಸೂರಿಕುಮೇರ್ ಗೋವಿಂದ ಭಟ್‌ಗೆ ಸನ್ಮಾನ

mng--24 July Dravida association
Published on

ಮಂಗಳೂರು: ಯುವವೇದಿಕೆ ಟ್ರಸ್ಟ್ ಉರ್ವ ಮಾರ್ಕೆಟ್, ದ್ರಾವಿಡ ಬ್ರಾಹ್ಮಣರ ಅಸೋಸಿಯೇಶನ್ ಯುವ ವೇದಿಕೆ ಗೋಕುಲ ಅಶೋಕನಗರ ದ ಜಂಟಿ ಆಶ್ರಯದಲ್ಲಿ ಆಷಾಢ ಶ್ರಾವ್ಯದ ಪ್ರಯುಕ್ತ, ನಗರದ ಅಶೋಕನಗರದಲ್ಲಿರುವ ಗೋಕುಲ ಕಲ್ಯಾಣ ಮಂಟಪದಲ್ಲಿ ಭಾರ್ಗವ ರಾಮ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.


ಮುಮ್ಮೇಳದಲ್ಲಿ ಸೂರಿಕುಮೇರಿ ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಮಧೂರು ವಾಸುದೇವ ರಂಗ ಭಟ್, ಮತ್ತು ವಿದ್ವಾನ್ ಸಂಕದ ಗುಂಡಿ ಗಣಪತಿ ಭಟ್, ಹಿಮ್ಮೇಳದಲ್ಲಿ ರವಿಚಂದ್ರ ಕನ್ನಡಿ ಕಟ್ಟೆ, ಕ್ರಷ್ಣ ಪ್ರಕಾಶ್ ಉಳಿತ್ತಾಯ, ಮುರಾರಿ ಕಡಂಬಳಿತ್ತಾಯ ಭಾಗವಹಿಸಿದ್ದರು.
ವೇದಮೂರ್ತಿ ಕಗ್ಗಿಮನೆ ಶ್ರೀನಿವಾಸ ಆಚಾರ್ಯ ಚಿತ್ರಾಪುರ ಉದ್ಘಾಟಿಸಿದರು. ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರಿ ಗೋವಿಂದ ಭಟ್ ಅವರನ್ನು ಗೌರವಿಸಲಾಯಿತು.


ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ಕೆ.ಭಟ್ ಸೇರಾಜೆ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಗೋವಿಂದ ಭಟ್ಟರ ಕಾಣಿಕೆ, ಪ್ರಭಾವ ಅಪಾರ, ಯಕ್ಷಗಾನ ರಂಗ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ಹಲವಾರು ಕೊಡುಗೆ ನೀಡಿದ್ದಾರೆ ಎಂದರು.


ಪತ್ತುಮುಡಿ ಸೂರ್ಯನಾರಾಯಣ ರಾವ್, ದ್ರಾವಿಡ ಬ್ರಾಹ್ಮಣರ ಅಸೋಸಿಯೇಶನಿನ ಅಧ್ಯಕ್ಷ ಸುಮಂತ್ ಕುಮಾರ್, ಪೊಳಲಿ ನಿತ್ಯಾನಂದ ಕಾರಂತ್ ಉಪಸ್ಥಿತರಿದ್ದರು.


ರಕ್ಷಾ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ ರಾವ್ ವಂದಿಸಿದರು. ವಿಘ್ನೇಶ್ ನಾವಡ ಕಲಾವಿದರನ್ನು ಪರಿಚಯಿಸಿದರು. ಯುವ ವೇದಿಕೆ ಟ್ರಸ್ಟ್, ದ್ರಾವಿಡ ಬ್ರಾಹ್ಮಣರ ಅಸೋಸಿಯೇಶನ್, ಯುವವೇದಿಕೆ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net