More

    ನಾಯಿ ಹೆಸರಿಗೆ 36 ಕೋಟಿ ರೂ. ಮೌಲ್ಯದ ಆಸ್ತಿ ಬರೆದ ಭೂಪ! ಸಾಕುವವರಿಗೂ ಸಿಗುತ್ತೆ ಲಕ್ಷ ಲಕ್ಷ ಹಣ!

    ವಾಷಿಂಗ್ಟನ್​: ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವ ಅದೆಷ್ಟೋ ಜನರ ಮಧ್ಯೆ ನಾಯಿಯನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರೂ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ಅದೆಷ್ಟರ ಮಟ್ಟಿಗೆ ನಾಯಿಯನ್ನು ಹಚ್ಚಿಕೊಂಡಿದ್ದನೆಂದರೆ ತನ್ನ ಪೂರ್ತಿ ಆಸ್ತಿಯನ್ನು ನಾಯಿಗಾಗೇ ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ.

    ಅಮೆರಿಕದ ಆಗರ್ಭ ಶ್ರೀಮಂತ ಬಿಲ್​ ಡೋರಿಸ್​ ಎಂಟು ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ. ತಾನು ಸತ್ತ ನಂತರ ತನ್ನ 5 ಮಿಲಿಯನ್​ ಡಾಲರ್​ (ಸರಿ ಸುಮಾರು 36 ಕೋಟಿ ರೂಪಾಯಿ) ಆಸ್ತಿಯನ್ನು ಒಂದು ಟ್ರಸ್ಟ್​ ಹೆಸರಿಗೆ ಬರೆದಿದ್ದಾನೆ. ನನ್ನ ಲೂಲುವನ್ನು ನೋಡಿಕೊಳ್ಳುವ ಟ್ರಸ್ಟ್​ಗೆ ಈ ಆಸ್ತಿ ಸೇರುತ್ತದೆ ಎಂದು ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ.

    ಡೋರಿಸ್​ ಕೊನೆಯಾಸೆಯಂತೆ ಟ್ರಸ್ಟ್​ ನಾಯಿಯ ಜವಾಬ್ದಾರಿಯನ್ನು ಹೊತ್ತಿದೆ. ಆತನ ಸ್ನೇಹಿತೆ ಮಾರ್ಥಾ ಬರ್ಟನ್ ಮನೆಯಲ್ಲಿ ಲೂಲುವನ್ನು ಬಿಡಲಾಗಿದೆ. ಲೂಲುವನ್ನು ನೋಡಿಕೊಳ್ಳುವುದಕ್ಕಾಗಿ ಪ್ರತಿ ತಿಂಗಳಿಗೆ ಇಂತಿಷ್ಟು ಎಂದು ಬರ್ಟನ್​ಗೆ ಹಣ ನೀಡಲಾಗುತ್ತಿದೆ.

    ಡೋರಿಸ್​ ನಾಯಿಯನ್ನು ಅದೆಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದ ಎನ್ನುವುದನ್ನು ಕಣ್ಣಾರೆ ಕಂಡಿರುವ ಬರ್ಟನ್​ ಲೂಲುವನ್ನು ಅಷ್ಟೇ ಪ್ರೀತಿಯಿಂದ ಸಾಕುತ್ತಿದ್ದಾರೆ. ಲೂಲುಗಾಗಿ ಎಲ್ಲವನ್ನೂ ಮಾಡಲು ಸಿದ್ಧ ಎಂದು ಅವರು ತಿಳಿಸಿದ್ದಾರೆ. ಲೂಲುವಿನ ಜೀವಿತಾವಧಿಗೆ ಬೇಕಾಗಿರುವುದಷ್ಟೇ ಅಲ್ಲದೆ ಅದರ ನೂರು ಪಟ್ಟು ಹಣವನ್ನು ಡೋರಿಸ್ ಟ್ರಸ್ಟ್​ ಹೆಸರಿಗೆ ಮಾಡಿಟ್ಟಿದ್ದು, ಅನೇಕರ ಮನಸ್ಸಲ್ಲಿ ಅಳಿಸಲಾಗದ ಸಂದೇಶವನ್ನು ಬರೆದಿಟ್ಟಿದೆ. (ಏಜೆನ್ಸೀಸ್​)

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಎದೆಹಾಲು! ಕಾರಣ ಕೇಳಿದ ತಾಯಿಗೆ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts