More

    ಇದ್ದಕ್ಕಿದ್ದಂತೆ ಹಸಿರು ಬಣ್ಣಕ್ಕೆ ತಿರುಗಿದ ಎದೆಹಾಲು! ಕಾರಣ ಕೇಳಿದ ತಾಯಿಗೆ ಶಾಕ್​

    ಮೆಕ್ಸಿಕೋ: ಗರ್ಭಾವಸ್ಥೆ ಮತ್ತು ಹೆರಿಗೆ ಆದ ನಂತರ ಪ್ರತಿಯೊಂದು ವಿಚಾರವೂ ಅತ್ಯಂತ ಸೂಕ್ಷ್ಮವಾಗಿರುತ್ತದೆ. ತಾಯಿಯ ಎದೆ ಹಾಲು ಎಷ್ಟು ಪ್ರಮಾಣದಲ್ಲಿದೆ, ಮಗುವಿಗೆ ಸಮರ್ಪಕವಾಗಿದೆಯೇ? ಆರೋಗ್ಯಕರವಾಗಿದೆಯೇ ಎನ್ನುವ ವಿಚಾರದ ಬಗ್ಗೆ ವೈದ್ಯರು ಹೆಚ್ಚಿನ ಗಮನ ಕೊಡುತ್ತಾರೆ. ಇಲ್ಲೊಬ್ಬ ತಾಯಿಯ ಎದೆ ಹಾಲಿನ ಬಣ್ಣ ಏಕಾಏಕಿ ಹಸಿರು ಬಣ್ಣಕ್ಕೆ ತಿರುಗಿದ್ದು, ಅಚ್ಚರಿ ಮೂಡುವಂತಾಗಿದೆ.

    ಮೆಕ್ಸಿಕೋದ ಅನ್ನಾ ಕಾರ್ಟೆಜ್ (23) ಇತ್ತೀಚೆಗೆ ಮಗುವಿಗೆ ಜನ್ಮವಿತ್ತಿದ್ದಾಳೆ. ಮಗುವಿಗೆ ಜನ್ಮವಿತ್ತ ನಂತರ ಆಕೆ ಮಗುವಿಗೆ ಹಾಲುಣಿಸಲು ಹೋದಾಗ ಎದೆ ಹಾಲಿನ ಬಣ್ಣ ಹಸಿರಾಗಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡ ಆಕೆ ತಕ್ಷಣ ವೈದ್ಯರಿಗೆ ಈ ವಿಚಾರ ತಿಳಿಸಿದ್ದಾಳೆ. ವೈದ್ಯರು ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಆಕೆಯಲ್ಲಿ ಕರೊನಾ ಸೋಂಕಿರುವುದು ಪತ್ತೆಯಾಗಿದೆ. ನಂತರ ಮಗುವನ್ನೂ ಪರೀಕ್ಷೆ ಮಾಡಲಾಗಿದ್ದು, ತಾಯಿಯ ಹಾಲಿನಿಂದಾಗಿ ಮಗುವಿಗೂ ಕರೊನಾ ಹರಡಿರುವುದು ದೃಢವಾಗಿದೆ.

    ತಾಯಿಯ ಎದೆ ಹಾಲಿನ ಬಣ್ಣ ಬದಲಾಗುವುದು ಚಿಂತಿಸಬೇಕಾದಂತ ವಿಚಾರವೇನಲ್ಲ. ದೇಹವನ್ನು ಸೋಕುವ ವೈರಸ್​ ವಿರುದ್ಧ ಆಂಟಿಬಾಡಿಗಳು ಹೋರಾಡುವಾಗ ಈ ರೀತಿ ಹಾಲಿನ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಅನ್ನಾ ಕರೊನಾದಿಂದ ಚೇತರಿಸಿಕೊಂಡ ನಂತರ ಆಕೆಯ ಎದೆ ಹಾಲಿನ ಬಣ್ಣ ಬಿಳಿ ಬಣ್ಣಕ್ಕೆ ವಾಪಾಸಾಗಿದ್ದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ಹೆಲಿಕಾಪ್ಟರ್​​ ಕೊಡಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ! ಬೇಡಿಕೆಯ ಹಿಂದಿದೆ ನೋವಿನ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts