More

    ಹೆಲಿಕಾಪ್ಟರ್​​ ಕೊಡಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ! ಬೇಡಿಕೆಯ ಹಿಂದಿದೆ ನೋವಿನ ಕಥೆ

    ಭೋಪಾಲ್​: ಬೈಕು, ಕಾರು ತೆಗೆದುಕೊಳ್ಳಬೇಕೆನ್ನುವ ಬಯಕೆ ಎಲ್ಲರಿಗೂ ಇರುತ್ತದೆ. ಆದರೆ ಇಲ್ಲೊಂದು ಸಣ್ಣ ಗ್ರಾಮದ ಮಹಿಳೆಗೆ ಹೆಲಿಕಾಫ್ಟರ್​ ಬೇಕಂತೆ. ನನಗೆ ಹೆಲಿಕಾಪ್ಟರ್​ ಕೊಡಿಸಿ, ಇಲ್ಲವೇ ಅದಕ್ಕೆ ಸಾಲ ಕೊಡಿಸಿ ಎಂದು ಮಹಿಳೆಯೊಬ್ಬಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಆದರೆ ಈ ರೀತಿಯ ಬೇಡಿಕೆಯ ಹಿಂದಿಬನ ಕಥೆ ಕೇಳಿದರೆ ನಿಮಗೂ ಒಮ್ಮೆಗೆ ಅಚ್ಚರಿ ಆಗುವುದು ಗ್ಯಾರಂಟಿ.

    ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಅಗರ್ ಗ್ರಾಮದ ನಿವಾಸಿ ಬಸಂತಿ ಬಾಯಿ ಲೋಹರ್​ ಇಂತದ್ದೊಂದು ಪತ್ರವನ್ನು ಬರೆದಿದ್ದಾರೆ. ಆಕೆಗೆ ಅವಳ ಮನೆಯಿಂದ ತುಸು ದೂರದಲ್ಲಿ ಹೊಲವಿದೆಯಂತೆ. ಆ ಕುಟುಂಬಕ್ಕೆ ಆ ಹೊಲವೇ ಆದಾಯದ ಮೂಲವಾಗಿದ್ದು, ಅದರಿಂದಲೇ ಜೀವನ ನಡೆಯುತ್ತಿದೆ. ಆದರೆ ಇತ್ತೀಚೆಗೆ ಆ ಹೊಲಕ್ಕೆ ಹೋಗುವುದು ಸಾಧ್ಯವಾಗುತ್ತಿಲ್ಲ. ಅದೇ ಕಾರಣಕ್ಕೆ ಹೆಲಿಕಾಪ್ಟರ್​ ಕೊಡಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.

    ಊರಿನ ಪರಮಾನಂದ ಪಾಟಿದಾರ್​ ಕುಟುಂಬದ ಜತೆ ಮಹಿಳೆಯ ಕುಟುಂಬವು ವೈಯಕ್ತಿಕ ಕಲಹ ಹೊಂದಿದೆಯಂತೆ. ಅದೇ ಕಾರಣದಿಂದಾಗಿ ಪಾಟಿದಾರ್​ ಮತ್ತು ಅವರ ಲವ ಕುಶ ಹೆಸರಿನ ಇಬ್ಬರು ಮಕ್ಕಳು ಸೇರಿ ಮಹಿಳೆಯು ಹೊಲಕ್ಕೆ ಹೋಗುವ ದಾರಿಯನ್ನು ಮುಚ್ಚಿಬಿಟ್ಟಿದ್ದಾರಂತೆ. ಯಾವ ರೀತಿಯಲ್ಲೂ ಆಕೆ ಹೊಲಕ್ಕೆ ಹೋಗದಂತೆ ಬಂದೋಬಸ್ತ್​ ಮಾಡಲಾಗಿದೆಯಂತೆ. ಈ ವಿಚಾರವಾಗಿ ಆಕೆ ಸ್ಥಳೀಯ ಆಡಳಿತಗಳಿಗೆ ದೂರು ನೀಡಿದ್ದಾಳೆ. ಆದರೆ ಅದರಿಂದ ಯಾವುದೇ ಸಹಾಯವಾಗಿಲ್ಲ. ಆ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರಪತಿಗಳಿಗೇ ಪತ್ರ ಬರೆದಿದ್ದಾಳೆ. ಟೈಪಿಸ್ಟ್​ ಒಬ್ಬರನ್ನು ಸಂಪರ್ಕಿಸಿ ಅವರ ಸಹಾಯದಿಂದ ಹಿಂದಿಯಲ್ಲಿ ಪತ್ರ ಟೈಪ್​ ಮಾಡಿಸಿ ಕಳುಹಿಸಿಕೊಟ್ಟಿದ್ದಾಳೆ. ಹೆಲಿಕಾಪ್ಟರ್​​ ಕೊಡಿಸಿ, ಇಲ್ಲವೇ ಹೆಲಿಕಾಪ್ಟರ್​ ಕೊಳ್ಳಲು ಸಾಲ ಮತ್ತು ಅದರ ಪರವಾನಗಿ ಕೊಡಿಸಿ ಎಂದು ಪತ್ರದಲ್ಲಿ ಬೇಡಿಕೆಯಿಟ್ಟಿದ್ದಾಳೆ.

    ಹೆಲಿಕಾಪ್ಟರ್​​ ಕೊಡಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಮಹಿಳೆ! ಬೇಡಿಕೆಯ ಹಿಂದಿದೆ ನೋವಿನ ಕಥೆ
    ಮಹಿಳೆಯ ಈ ಪತ್ರದ ವಿಚಾರ ಸಖತ್​ ವೈರಲ್​ ಆಗಿದೆ. ಕ್ಷೇತ್ರದ ಶಾಸಕರ ಕಿವಿಗೂ ಈ ವಿಚಾರ ಮುಟ್ಟಿದ್ದು, ಇದೀಗ ಮಹಿಳೆಯ ಸಹಾಯಕ್ಕೆ ಅವರು ಮುಂದೆ ಬಂದಿದ್ದಾರೆ. ಜಮೀನು ತಲುಪಲು ಸಾಧ್ಯವಾಗದಿದ್ದರೆ ನಾನು ಆಕೆಗೆ ಸಹಾಯ ಮಾಡಲಿದ್ದೇನೆ, ಆದರೆ ಹೆಲಿಕಾಪ್ಟರ್​​ ಕೊಡಿಸುವುದು ದೂರದ ಮಾತು ಎಂದು ಶಾಸಕ ಯಶ್ಪಾಲ್ ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಹೆಂಡತಿ ನೋಡಲು ದೂರದ ಊರಿಂದ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹಿಂಬದಿ ಬಾಗಿಲಿಂದ ಬಂದವ ಹೀಗೇಕೆ ಮಾಡಿದ?

    ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಉಗ್ರ ಕೊನೆಗೂ ಅರೆಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts