More

    ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ ಉಗ್ರ ಕೊನೆಗೂ ಅರೆಸ್ಟ್‌

    ಜಮ್ಮು: ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದ ಉಗ್ರ ಝಹೂರ್ ಅಹ್ಮದ್’ ಕೊನೆಗೂ ‍ಪೊಲೀಸರ ಬಲೆಗೆ ಬಿದ್ದಿದ್ದಾನೆ.

    ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಈತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರಗಾಮಿ ಸಂಘಟನೆಯ ಸದಸ್ಯ.

    ಈತ ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದ. ಅನಂತನಾಗ್ ಪೊಲೀಸರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಝಹೂರ್ ಅಹ್ಮದ್’ ಅಲಿಯಾಸ್ ಖಾಲಿದ್‍ನನ್ನು ಸಾಂಬಾ ಜಿಲ್ಲೆಯ ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಈತ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಕಾನ್ಸ್‌ಟೆಬಲ್‌ ಹಾಗೂ ಮೂವರು ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದ. ಈತನಿಗಾಗಿ ಅಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದರು. ಈತ ಇರುವ ಬಗ್ಗೆ ಖಚಿತ ಸುದ್ದಿ ತಿಳಿಯುತ್ತಿದ್ದಂತೆಯೇ ಭದ್ರತಾಪಡೆಗಳೊಂದಿಗೆ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಷ್ಕರ್-ಎ-ತೋಯ್ಬಾ (ಎಲ್‍ಇಟಿ) ಭಯೋತ್ಪಾದಕ ಸಂಘಟನೆ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟಿಆರ್‍ಎಫ್‍ನ ಮುಖಂಡನಾಗಿ ಝಹೂರ್ ಅಹ್ಮದ್’ ಈ ಭಾಗದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಪಾಕಿಸ್ತಾನದಿಂದ ಬಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಝಹೂರ್ ಅಹ್ಮದ್’ ಸಾಂಬಾಗೆ ಬಂದಿದ್ದು, ಸ್ಥಳೀಯ ಬಾರಿ ಬ್ರಹ್ಮಣಾ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ ಖಚಿತ ಸುಳಿವು ಅನಂತನಾಗ್ ಪೊಲೀಸರು ಹೇಳಿದ್ದಾರೆ.

    2004ರಲ್ಲಿ ಝಹೂರ್ ಶಸ್ತ್ರಾಸ್ತ್ರ ತರಬೇತಿ ಪಡೆಯುವ ಸಲುವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ತೆರಳಿದ್ದ. ಬಳಿಕ ಹಿಂತಿರುಗಿ ಬರುವಾಗ 5 ವಿದೇಶಿ ಉಗ್ರರೊಂದಿಗೆ ಭಾರತಕ್ಕೆ ಬಂದಿದ್ದ. ಇದಾದ 2 ವರ್ಷಗಳ ಬಳಿಕ ಪೊಲೀಸರ ಬಳಿ ಶರಣಾಗಿದ್ದ. ಆದರೆ, ಕೆಲ ವರ್ಷಗಳ ಬಳಿಕ ಟಿಆರ್’ಎಫ್’ಗೆ ಸೇರ್ಪಡೆಗೊಳ್ಳುವ ಮೂಲಕ ಮತ್ತೆ ಉಗ್ರ ಚಟುವಟಿಕೆಗಳಲ್ಲಿ ಕೈಜೋಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಬಂಧಿತ ಝಹೂರ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈತ ನೀಡಿದ ಮಾಹಿತಿ ಮೇರೆಗೆ ಮತ್ತಷ್ಟು ದಾಳಿಗಳು ಹಾಗೂ ಮತ್ತಷ್ಟು ಜನರನ್ನು ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

    ಖಾಲಿದ್, ಕಳೆದ ವರ್ಷ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನ ಬಿಜೆಪಿ ಕಾರ್ಯಕರ್ತರನ್ನು ಹತ್ಯೆಗೈದು ಒಂದು ಪೊಲೀಸ್ ಸಿಬ್ಬಂದಿಯನ್ನು ಫುರ್ರಾ ಗ್ರಾಮದಲ್ಲಿ ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಕಳೆದ ವಾರ ಉಗ್ರ ಸಂಘಟನೆ ಲಷ್ಕರ್-ಎ ಮುಸ್ತಾಫಾದ ಹಿದಾಯುತುಲ್ಲಾ ಮಲಿಕ್ ಅಲಿಯಾಸ್ ಹೊಸೈನ್‍ನನ್ನು ಜಮ್ಮುವಿನ ಕುಂಜವಾನಿ ಪ್ರದೇಶದಲ್ಲಿ ಬಂಧಿಸಿದ್ದರು.

    ಮನೆಯಿಂದ ಹೊರಟ ತುಂಬು ಗರ್ಭಿಣಿ ದಾರಿ ಮಧ್ಯೆಯೇ ಮಗುವನ್ನು ಹೆತ್ತು ಪರೀಕ್ಷೆ ಬರೆದು ಬಂದಳು!

    ಕಾಲೇಜಿನ ಕುಸ್ತಿ ಅಖಾಡಾದಲ್ಲಿ ಗುಂಡಿನ ದಾಳಿ- ಐದು ಮಂದಿಯ ಸಾವು; ಹಲವರ ಸ್ಥಿತಿ ಗಂಭೀರ

    ಬಂಜಾರ ನಾಯಕಿ, ಟಿಕ್‌ಟಾಕ್‌ ಸ್ಟಾರ್‌ ನಿಗೂಢ ಸಾವು- ಆಡಿಯೋ ಕ್ಲಿಪ್ಪಿಂಗ್‌ನಲ್ಲಿ ಮಹಾರಾಷ್ಟ್ರ ಸಚಿವನ ಹೆಸರು!

    ತಾನು ಲವರ್‌ ಜತೆ ಮದುವೆಯಾಗಲು ಪತ್ನಿಯ ಸ್ಕೂಟಿಗೆ ಟ್ರ್ಯಾಕರ್‌ ಫಿಕ್ಸ್‌ ಮಾಡಿದ ಪತಿರಾಯ!

    ಗಂಡನ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪತ್ನಿ, ಮಕ್ಕಳಿಗೆ ಹಕ್ಕಿದೆಯೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts