ತರಕಾರಿಗಳಲ್ಲಿ ಪೋಷಕಾಂಶ ಹೇರಳ

kalthodu
ಕಾಲ್ತೋಡು ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ನಡೆದ ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮವನ್ನು ಸಮಾಜಸೇವಕ ಸಂಜೀವ ಶೆಟ್ಟಿ ಉದ್ಘಾಟಿಸಿದರು. ಡಾ. ವೀಣಾ ಕಾರಂತ್, ಸಿಎಚ್‌ಒ ಸುಭಾಷ್ ಇದ್ದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಹಿರಿಯರ ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ಸುತ್ತಮುತ್ತಲ ಬೆಳೆಯುವ ಸೊಪ್ಪು ತರಕಾರಿಗಳಲ್ಲಿ ಪೋಷಕಾಂಶ ಹೇರಳವಾಗಿದೆ. ದಿನವೂ ಸೊಪ್ಪು ತರಕಾರಿಗಳನ್ನೇ ಆಹಾರವಾಗಿಸಿದರೆ ಪೌಷ್ಟಿಕಾಂಶಗಳ ಕೊರತೆಯಾಗದು. ಈ ನಿಟ್ಟಿನಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪ್ರದರ್ಶನದೊಂದಿಗೆ ಆಯೋಜಿಸಲಾದ ಪೌಷ್ಟಿಕ ಮಾಸಾಚರಣೆ ಅರ್ಥಪೂರ್ಣ ಎಂದು ಸಮಾಜಸೇವಕ ಸಂಜೀವ ಶೆಟ್ಟಿ ಹೇಳಿದರು.

ಉಡುಪಿ ಜಿಪಂ ಆಯುಷ್ ಇಲಾಖೆ, ಕಾಲ್ತೋಡು ಗ್ರಾಮ ಪಂಚಾಯಿತಿ, ಆಯುಷ್ಮಾನ್ ಆರೋಗ್ಯ ಮಂದಿರ ಆಯುರ್ವೇದ ಚಿಕಿತ್ಸಾಲಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಪೌಷ್ಟಿಕ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಇಂದಿರಾ ನಾಯಕ್ ಅವರು ಅಂಗನವಾಡಿಯಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಪೌಷ್ಟಿಕ ಆಹಾರಗಳ ಬಗ್ಗೆ ಮಾಹಿತಿ, ಪೋಷಣ್ ಮಾಸಾಚರಣೆಯ ಉದ್ದೇಶ ವಿವರಿಸಿದರು. ಡಾ.ವೀಣಾ ಕಾರಂತ್ ಅವರು ಪ್ರದರ್ಶನಕ್ಕೆ ಇಟ್ಟ ಸೊಪ್ಪು ತರಕಾರಿಗಳು ಹಾಗೂ ಆಹಾರ ಪದಾರ್ಥಗಳಲ್ಲಿರುವ ಪೌಷ್ಟಿಕಾಂಶ ಹಾಗೂ ಸುಲಭವಾಗಿ ತಯಾರಿಸಬಲ್ಲ ಆಹಾರ ಬಗ್ಗೆ ವಿವರಿಸಿದರು. ವಿಶ್ವ ಅಲ್ಜಿಮರ್ ಮಾತನಾಡಿದರು.

ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಎಚ್‌ಒ ಸುಭಾಷ್, ಯೋಗ ತರಬೇತುದಾರೆ ಸರಸ್ವತಿ ಕುಲಾಲ್ ಉಪಸ್ಥಿತರಿದ್ದರು. ಔಷಧ ಸಸ್ಯಗಳನ್ನು ವಿತರಿಸಲಾಯಿತು. ಬಳಿಕ ಆಯುಷ್ ಕಷಾಯ ವಿತರಿಸಲಾಯಿತು. ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೀಮಂತ ಕಾರ್ಯಕ್ರಮ ನೆರವೇರಿಸಿದರು. ನಂತರ ಸಾರ್ವಜನಿಕರಿಗೆ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು. ಅಂಗನವಾಡಿ ಶಿಕ್ಷಕಿ ಸುಮಾ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net