More

    ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

    ಕೋಲ್ಕತ್ತ: ನಟ ಸುಶಾಂತ್​ ಸಿಂಗ್​ ಸಾವಿನ ಬಳಿಕ ರಿಯಾ ಚಕ್ರವರ್ತಿ ಸಿಕ್ಕಾಪಟೆ ಸುದ್ದಿಯಲ್ಲಿದ್ದಾರೆ. ಸುಶಾಂತ್​ಗೆ ಡ್ರಗ್ಸ್​ ಕೊಡುತ್ತಿದ್ದರು, ಅವರ ಹಣವನ್ನು ಬಳಸಿಕೊಳ್ಳುತ್ತಿದ್ದರು, ಸುಶಾಂತ್​ ಮೇಲೆ ಮಾಟಮಂತ್ರ ಮಾಡಿಸಿದ್ದರು ಎಂಬಿತ್ಯಾದಿ ಸುದ್ದಿಗಳೆಲ್ಲ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ರಿಯಾ ಬಂಧನವಾಗಿದ್ದು, ಜೈಲಿನಲ್ಲಿ ಇದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಂತೂ ಅನೇಕರು ರಿಯಾ ಚಕ್ರವರ್ತಿಯವರನ್ನು ಟ್ಯಾಗ್ ಮಾಡಿ ನೆಗೆಟಿವ್ ಹ್ಯಾಷ್​ಟ್ಯಾಗ್​ಗಳನ್ನು ಕೊಟ್ಟು ಬೈಯುತ್ತಿದ್ದಾರೆ. ರಿಯಾ ವಿರುದ್ಧ ಕೆಟ್ಟಕೆಟ್ಟ ಕಾಮೆಂಟ್​ಗಳನ್ನೂ ಬರೆಯುತ್ತಿದ್ದಾರೆ.

    ಹಾಗೇ ಕೊಲ್ಕತ್ತದಲ್ಲಿ ಕೂಡ ರಿಯಾ ಚಕ್ರವರ್ತಿಗೆ ಸಂಬಂಧಪಟ್ಟ ಒಂದು ಹ್ಯಾಷ್​​ಟ್ಯಾಗ್​ ಟ್ರೆಂಡ್ ಆಗಿದೆ. ಕೊಲ್ಕತ್ತದ ಪುರುಷರು #RheaChakrabortyOfMyLife (ರಿಯಾ ಚಕ್ರವರ್ತಿ ಆಫ್​ ಮೈ ಲೈಫ್​) ಎಂಬ ಹ್ಯಾಷ್​ಟ್ಯಾಗ್​ ಮೂಲಕ ತಮ್ಮ ಮಾಜಿ ಪ್ರೇಯಸಿಯರನ್ನು ನಿಂದಿಸುತ್ತಿದ್ದಾರೆ. ಮೋಸ ಮಾಡಿ ಬಿಟ್ಟುಹೋದ, ಬೇರೆಬೇರೆ ಕಾರಣಕ್ಕೆ ದೂರವಾದ ತಮ್ಮ ಗರ್ಲ್​ಫ್ರೆಂಡ್​​ಗಳನ್ನು ಅಪಮಾನ ಮಾಡಲು, ಅವರಿಗೆ ನಿಂದಿಸಿ, ಸುಳ್ಳು ಆರೋಪಗಳನ್ನು ಮಾಡಲು #RheaChakrabortyOfMyLifeನ್ನು ಬಳಕೆ ಮಾಡುತ್ತಿದ್ದಾರೆ.  ಇದನ್ನೂ ಓದಿ: ಡ್ರಗ್ಸ್​ ಲಿಸ್ಟ್​ನಲ್ಲಿ ರಾಕುಲ್​, ಸಾರಾ ಹೆಸರಿರುವುದು ಹೌದು … ಎನ್​ಸಿಬಿ ಒಪ್ಪಿಗೆ

    ಅನೇಕ ಯುವತಿಯರು ಈ ಬಗ್ಗೆ ಸೈಬರ್​ ಸೆಲ್​ಗೆ ದೂರು ನೀಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. #RheaChakrabortyOfMyLife ಎಂಬ ಹ್ಯಾಷ್​ಟ್ಯಾಗ್​ ಮೂಲಕ ನಮ್ಮನ್ನು ನಿಂದಿಸುತ್ತಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ನಮ್ಮ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಯುವತಿಯರು ಮಾಜಿ ಬಾಯ್​ಫ್ರೆಂಡ್ಸ್​ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.

    ಈ ಪ್ರಕರಣದಲ್ಲಿ ಕೊಲ್ಕತ್ತ ಪೊಲೀಸರು ಸದ್ಯ ಪ್ರೋನಾಯ್ ಚಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ರೂಪದರ್ಶಿಯೋರ್ವರು ದೂರು ನೀಡಿದ್ದರು. ಅವನು ನನ್ನ ಬಾಯ್​ಫ್ರೆಂಡ್ ಆಗಿದ್ದ. ಅವನಿಂದ ಬೇರೆಯಾಗಿದ್ದೇನೆ. ಇದೀಗ #RheaChakrabortyOfMyLife ಎಂಬ ಹ್ಯಾಷ್​ಟ್ಯಾಗ್​​ನಡಿ ನನ್ನ ಮಾನ ಹಾನಿ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿದೆ.  ಇದನ್ನೂ ಓದಿ: ‘ಗಡಿ ನಿಯಮಗಳನ್ನು ಚೀನಾ ಗೌರವಿಸುತ್ತಿಲ್ಲ…ಎಂಥದ್ದೇ ಸಂದರ್ಭ ಬಂದರೂ ಎದುರಿಸಲು ಸಿದ್ಧ’ -ರಕ್ಷಣಾ ಸಚಿವ

    ಉಳಿದಂತೆ ಈ ಬಗ್ಗೆ ಸೈಬರ್​ ಪೊಲೀಸರು ಅಲರ್ಟ್ ಆಗಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ.(ಏಜೆನ್ಸೀಸ್​)

    ಸೆ.25ರಿಂದ ಲಾಕ್​ಡೌನ್​ ಪಕ್ಕಾನಾ? ಏನಿದು ಒಕ್ಕಣೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts