ಅತ್ಯಾಚಾರ ಮತ್ತು ಕೊಲೆ ಬೆದರಿಕೆ ... ಸೈಬರ್​ ಪೊಲೀಸ್​ ಮೊರೆ ಹೋದ ಸುಶಾಂತ್​ ಪ್ರೇಯಸಿ

Sushant - Rhea - Final
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಮೌನವಾಗಿದ್ದ ಅವರ ಪ್ರೇಯಸಿ ರಿಯಾ ಚಕ್ರವರ್ತಿ, ಇದೀಗ ಕೊನೆಗೂ ತಮ್ಮ ಮೌನ ಮುರಿದಿದ್ದಾರೆ. ತಮ್ಮನ್ನು ಇಷ್ಟು ದಿನ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಮಾಡುತ್ತಿದ್ದ ಜನರ ವಿರುದ್ಧ ಸೈಬರ್ ಪೊಲೀಸ್​ ಮೊರೆ ಹೋಗಿದ್ದಾರೆ.

ಸುಶಾಂತ್​ ಸಿಂಗ್​ ಸಾವಿನ ನಂತರ ರಿಯಾ ಚಕ್ರವರ್ತಿ ವಿರುದ್ಧ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದರು. ಬರೀ ಟ್ರೋಲ್​ ಮಾಡುವುದಷ್ಟೇ ಅಲ್ಲ, ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ರಿಯಾ ಮೊದಲ ಬಾರಿಗೆ ಸಿಡಿದೆದ್ದಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಅವರು, 'ನನ್ನನ್ನ ಗೋಲ್ಡ್​ ಡಿಗ್ಗರ್​ ಎಂದು ಕರೆದರು. ನಾನು ಸುಮ್ಮನಿದ್ದೆ. ನನ್ನನ್ನು ಕೊಲೆಗಾರ್ತಿ ಎಂದರು. ಆಗಲೂ ಸುಮ್ಮನಿದ್ದೆ. ನನಗೆ ಇನ್ನೂ ಏನೇನೋ ಅಂದರು. ಆಗಲೂ ನಾನು ಮಾತನಾಡಲಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂದರೆ ಕೊಲೆ ಮಾಡಿಸ್ತೀನಿ, ರೇಪ್​ ಮಾಡಿಸ್ತೀನಿ ಅಂತೆಲ್ಲಾ ಹೇಳುವುದಿದೆಯಲ್ಲಾ ಅದು ದೊಡ್ಡ ಕ್ರೈಮ್​' ಎಂದು ರಿಯಾ ಹೇಳಿದ್ದಾರೆ.

'ನನಗೆ ಯಾರು ಈ ರೀತಿ ಹೇಳಿದರೋ, ಅವರಿಗೆ ಈ ಮಾತಿನ ಗಂಭಿರತೆ ಗೊತ್ತಿದೆಯಾ? ಇದು ದೊಡ್ಡ ಕ್ರೈಮ್​. ಈ ತರಹ ಯಾರನ್ನೂ ಹರಾಸ್​ ಮಾಡಬಾರದು. ದಯವಿಟ್ಟು ಸೈಬರ್​ ಕ್ರೈಮ್​ನವರು ಈ ವಿಷಯವಾಗಿ ಸೂಕ್ತ ಆಕ್ಷನ್​ ತೆಗೆದುಕೊಳ್ಳಬೇಕು. ತಾಳ್ಮೆಗೂ ಒಂದು ಮಿತಿ ಇದೆ' ಎಂದು ಸೈಬರ್​ ಕ್ರೈಮ್​ ಪೊಲೀಸರಿಗೆ ಟ್ಯಾಗ್​ ಮಾಡಿದ್ದಾರೆ ರಿಯಾ.

ಸುಶಾಂತ್​ ಸಾವಿನ ನಂತರ ಮೌನವಾಗಿದ್ದ ರಿಯಾ, ಮೊನ್ನೆಯಷ್ಟೇ ಒಂದು ಸುಧೀರ್ಘ ಪತ್ರ ಬರೆದಿದ್ದರು. 'ನನ್ನ ಎಮೋಷನ್​ಗಳನ್ನು ಹಿಡಿದಿಟ್ಟುಕೊಟ್ಟಲೂ, ಈಗಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಮನಸ್ಸು ಜಡ್ಡುಗಟ್ಟಿ ಹೋಗಿದೆ. ನಿನ್ನಿಂದ ಬಹಳ ವಿಷಯಗಳನ್ನು ಕಲಿತಿದ್ದೇನೆ. ನೀನಿಲ್ಲ ಎಂದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀನು ಒಂದು ಶಾಂತವಾದ ವಾತಾವರಣದಲ್ಲಿದ್ದೀಯಾ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆಸ್ಟ್ರೋನಾಮಿ ಬಗ್ಗೆ ನಿನಗೆ ವಿಪರೀತ ಆಸಕ್ತಿ. ಆ ಚಂದ್ರ, ನಕ್ಷತ್ರ, ಗ್ಯಾಲಕ್ಸಿಗಳೆಲ್ಲಾ ನಿನ್ನನ್ನು ಬಹಳ ಪ್ರೀತಿಯಿಂದ ಬರಮಾಡಿಕೊಂಡಿರಬೇಕು' ಎಂದು ರಿಯಾ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net