ಸುಶಾಂತ್​ ಇಲ್ಲದ 30 ದಿನ; ಭಾವುಕ ಪತ್ರ ಬರೆದ ಪ್ರೇಯಸಿ ರಿಯಾ ಚಕ್ರವರ್ತಿ

rhea_1579592816_618x347
Published on

ಸುಶಾಂತ್​ ಸಿಂಗ್​ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳಾಯಿತು. ಅವರ ಸಾವಿನ ನೋವಿನಿಂದ ಅವರ ಕುಟುಂಬ ಇನ್ನೂ ಕಣ್ಣೀರು ಹಾಕುತ್ತಿದೆ. ಅಭಿಮಾನಿ ವಲಯ ಅವರ ಸಾವಿಗೆ ನ್ಯಾಯ ಕೊಡಿಸುವಲ್ಲಿ ಅಭಿಯಾನವನ್ನೇ ಆರಂಭಿಸಿದೆ. ಇತ್ತ ತನಿಖೆ ನೆಪದಲ್ಲಿ ಬಾಲಿವುಡ್ ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ವಿಚಾರಣೆ ಎದುರಿಸಿ ಬಂದಿದ್ದ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ಇದೀಗ ಸುಶಾಂತ್​ ನೆನೆದು ಸುದೀರ್ಘವಾದ ಪತ್ರವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

'ನನ್ನ ಭಾವನೆಗಳನ್ನು ಎದುರಿಸಲು ಇನ್ನೂ ಹೆಣಗಾಡುತ್ತಿದ್ದೇನೆ.. ನನ್ನ ಹೃದಯದಲ್ಲಿ ಸರಿಪಡಿಸಲಾಗದ ಮರಗಟ್ಟುವಿಕೆ ಹಾಗೇ ಇರಲಿದೆ. ನೀವು ಪ್ರೀತಿಯನ್ನು ನಂಬುವಂತೆ ಮಾಡಿದವರು. ಅದರ ಶಕ್ತಿಯನ್ನು ತೋರಿಸಿಕೊಟ್ಟವರು. ಸರಳ ಗಣಿತದ ಸಮೀಕರಣವು ಜೀವನದ ಅರ್ಥವನ್ನು ಹೇಗೆ ಅರ್ಥೈಸಬಲ್ಲದು ಎಂದು ನೀವು ನನಗೆ ಕಲಿಸಿದ್ದೀರಿ ಮತ್ತು ನಾನು ಪ್ರತಿದಿನ ನಿಮ್ಮಿಂದ ಕಲಿತಿದ್ದೇನೆ’ ಎನ್ನುವ ರಿಯಾ ಸುಶಾಂತ್​ ಈಗ ಶಾಂತಿಯುತ ಸ್ಥಳದಲ್ಲಿದ್ದಾರೆ ಎಂದು ವಿವರಿಸಿದ್ದಾರೆ.

‘ನೀವು ಈಗ ಹೆಚ್ಚು ಶಾಂತಿಯುತ ಸ್ಥಳದಲ್ಲಿದ್ದೀರಿ ಎಂದು ನನಗೆ ತಿಳಿದಿದೆ. ಚಂದ್ರ, ನಕ್ಷತ್ರಗಳು, ಗೆಲಕ್ಸಿಗಳು ಶ್ರೇಷ್ಠ ಭೌತವಿಜ್ಞಾನಿ ಯನ್ನು ತೆರೆದ ತೋಳುಗಳಿಂದ ಸ್ವಾಗತಿಸುತ್ತಿವೆ. ನೀವಿಲ್ಲದೆ 30 ದಿನಗಳಾದವು. ಆದರೆ, ಜೀವನಪೂರ್ತಿ ನಿಮ್ಮ ಪ್ರೀತಿಸುತ್ತಿರುತ್ತೇನೆ’ ಹೀಗೆ ಪ್ರೀತಿ ತೋರಿದ ಸುಶಾಂತ್​ ಬಗ್ಗೆ ರಿಯಾ ಬರೆದುಕೊಂಡಿದ್ದಾರೆ.

ರಿಯಾ ಮತ್ತು ಸುಶಾಂತ್​ ಸಿಂಗ್​ ಮಧ್ಯೆ ಏನೋ ನಡೆಯುತ್ತಿದೆ ಎಂದು ಇಡೀ ಬಾಲಿವುಡ್​ ಮಾತನಾಡಿಕೊಳ್ಳುತ್ತಿತ್ತು. ಪಾರ್ಟಿ, ಲಂಚ್​ ಎಲ್ಲದರಲ್ಲಿಯೂ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡು ಹಲವು ವದಂತಿಗಳಿಗೂ ಕಾರಣವಾಗಿತ್ತು. ಇದೀಗ ಸುಶಾಂತ್​ ಸಾವಿನ ಬಳಿಕ ಅವರು ಹೇಳಿಕೊಟ್ಟ ಪ್ರೀತಿಯ ಬಗ್ಗೆ ರಿಯಾ ನೆನಪು ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net