ನಟಿ ಸಾರಾ ಅಲಿಖಾನ್ ಡ್ರೈವರ್​ಗೆ ಕರೊನಾ; ಆತಂಕದಲ್ಲಿ ಸೈಫ್​ ಅಲಿಖಾನ್​ ಕುಟುಂಬ

Saif_Ali_Khan_Sara_Ali_Khan_(1)_571_855
Published on

ಬಾಲಿವುಡ್​ನ ಘಟಾನುಘಟಿ ಕಲಾವಿದರಿಗೆ ಕರೊನಾ ಅಂಟಿಕೊಂಡಿದೆ. ಅಮಿತಾಬ್​ ಬಚ್ಚನ್​, ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಹಲವು ಕಿರುತೆರೆ ನಟರಲ್ಲಿಯೂ ಕರೊನಾ ಕಾಣಿಸಿಕೊಂಡು, ಶೂಟಿಂಗ್​ ನಿಲ್ಲಿಸಲಾಗಿತ್ತು. ಇದೀಗ ಸೈಫ್​ ಅಲಿಖಾನ್​ ಕುಟುಂಬಕ್ಕೂ ಕರೊನಾ ಆತಂಕ ಎದುರಾಗಿದೆ.

ಅಂದರೆ, ಸೈಫ್​ ಅಲಿಖಾನ್​ ಪುತ್ರಿ ಸಾರಾ ಅಲಿಖಾನ್ ಕಾರ್ ಚಾಲಕನಿಗೆ ಕರೊನಾ ಇರುವುದು ದೃಢಪಟ್ಟಿದೆ. ಹೀಗಾಗಿ ಸೈಫ್​ ಅಲಿಖಾನ್​ ಕುಟುಂಬ ಆತಂಕದಲ್ಲಿಯೇ ಕೋವಿಡ್​ ಪರೀಕ್ಷೆಗೆ ಮುಂದಾಗಿತ್ತು. ಖುಷಿಯ ವಿಚಾರ ಏನೆಂದರೆ, ಪರೀಕ್ಷೆಯಲ್ಲಿ ಎಲ್ಲರ ವರದಿ ನೆಗೆಟಿವ್​ ಬಂದಿದೆ.

ಅಂದಹಾಗೆ, ಸದ್ಯ ಕರೊನಾ ಹಿನ್ನೆಲೆಯಲ್ಲಿ ತಾಯಿ ಅಮೃತಾ ಸಿಂಗ್​ ಜತೆಯಲ್ಲಿಯೇ ಸಾರಾ ಮತ್ತು ಇಬ್ರಾಹಿಂ ಉಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಸಾರಾ, ‘ನಮ್ಮ ಮನೆಯ ಕಾರು ಚಾಲಕನಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಅವರನ್ನು ಕ್ವಾರಂಟೈನ್​ ಮಾಡಲಾಗಿದೆ. ಇನ್ನುಳಿದಂತೆ ನಮ್ಮ ಮನೆಯವರೆಲ್ಲರ ವರದಿ ನೆಗೆಟಿವ್​ ಬಂದಿದೆ. ಬಿಎಂಸಿಗೆ ನಮ್ಮ ಕೃತಜ್ಞತೆ’ ಎಂದಿದ್ದಾರೆ

ಇತ್ತೀಚಿನ ಕೆಲ ದಿನಗಳಿಂದ ಆಮಿರ್​ ಖಾನ್​, ಕರಣ್​ ಜೋಹರ್​ ಮತ್ತು ಬೋನಿ ಕಪೂರ್ ಮನೆ ಕೆಲಸದವರಲ್ಲಿ ಕರೊನಾ ಇರುವುದು ದೃಢಪಟ್ಟಿತ್ತು. ಇದೀಗ ಸಾರಾ ಅಲಿಖಾನ್​ ಕಾರ್​ ಚಾಲಕನಲ್ಲಿ ಕರೊನಾ ಕಾಣಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net