ರಾಜಮೌಳಿ ‘ಆರ್​ಆರ್​ಆರ್​’ ಚಿತ್ರ ಸೋತರೆ, ಸಂಭ್ರಮಾಚರಣೆ; ಆರ್​ಜಿವಿ ಆಡಿಯೋ ಲೀಕ್​!

rajamouli
Published on

ಸಿನಿಮಾ ಇಂಡಸ್ಟ್ರಿ ಬಣ್ಣದ ಮಾಯೆ ಎಂಬುದು ಎಲ್ಲರಿಗೂ ಗೊತ್ತು. ತೆರೆಮೇಲಷ್ಟೇ ಅದು ಚೆಂದ ಎಂಬ ಕಡು ಸತ್ಯವನ್ನು ಎಲ್ಲರೂ ಅರಿತಿದ್ದಾರೆ. ಇಲ್ಲಿ ಗೆಲುವಿನ ಜತೆಗೆ ಸೋಲನ್ನೂ ಸಂಭ್ರಮಿಸುವವರಿದ್ದಾರೆ. ಎದುರಿಗೆ ಆಲ್​ ದಿ ಬೆಸ್ಟ್ ಎಂದವರು, ಅವರ ಹಿಂದೆ ಸಿನಿಮಾ ಸೋಲಲಿ ಎಂದು ಬಯಸುವವರೂ ಕಾಣಸಿಗುತ್ತಾರೆ. ಇದೀಗ ಇದೇ ವಿಚಾರ ರಾಜಮೌಳಿಯ ‘ಆರ್​ಆರ್​ಆರ್​’ ಚಿತ್ರಕ್ಕೂ ಎದುರಾಗಿದೆ. ಟಾಲಿವುಡ್​ನ ಮೋಸ್ಟ್ ಕಾಂಟ್ರವರ್ಸಿ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್​ ಗೋಪಾಲ್​ ವರ್ಮಾ ಅಂತ ಒಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಆರ್​ಜಿವಿ ನಿರ್ದೇಶನದ ನೀಲಿ ತಾರೆ ಮಿಯಾ ಮಲ್ಕೋವಾ ಮುಖ್ಯಭೂಮಿಕೆಯಲ್ಲಿರುವ ‘ಕ್ಲೈಮ್ಯಾಕ್ಸ್​‘ ಚಿತ್ರದ ಆನ್​ಲೈನ್​ ಸಂದರ್ಶನವೊಂದರಲ್ಲಿ ರಾಜಮೌಳಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆರ್​ಜಿವಿ ಹೇಳಿಕೆ ನೀಡಿರುವ ವಿಚಾರ ಕೇವಲ ಅವರೊಬ್ಬರ ದೃಷ್ಟಿಕೋನದಲ್ಲಿ ಬಿಂಬಿತವಾದ ಹೇಳಿಕೆಯಲ್ಲ. ಎಲ್ಲ ನಿರ್ದೇಶಕರು, ಸಿನಿಮಾ ಕಲಾವಿದರು ಹೇಳಿಕೊಳ್ಳುವ ಮಾತದು ಎಂದಿದ್ದಾರೆ. ಹಾಗಾದರೆ ಆರ್​ಜಿವಿಯ ಆ ಕಾಂಟ್ರವರ್ಸಿ ಹೇಳಿಕೆ ಏನದು?

‘ರಾಜಮೌಳಿಯ ಯಶಸ್ಸನ್ನು ಸಹಿಸದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರಿದ್ದಾರೆ. ಸರಣಿ ಸೂಪರ್​ ಹಿಟ್​ ಸಿನಿಮಾ ನೀಡಿರುವ ಅವರ ಕೆಲಸವನ್ನು, ಪಾಪ್ಯುಲಾರಿಟಿಯನ್ನು ಕಂಡು ಹೊಟ್ಟೆಕಿಚ್ಚು ಪಡುವವರೇ ಹೆಚ್ಚು. ಅವರ ಆ ಯಶಸ್ಸನ್ನು ಕೆಲವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಒಂದು ವೇಳೆ ಆರ್​ಆರ್​ಆರ್​ ಸಿನಿಮಾ ಸೋತರೆ, ರಸ್ತೆಗಿಳಿದು, ಕೈಯಲ್ಲಿ ಶಾಂಪೇನ್​ ಹಾರಿಸಿ ಸಂಭ್ರಮಿಸುವವರೇ ಹೆಚ್ಚಿದ್ದಾರೆ. ಇದೇ ವಾಸ್ತವ!’ ಎಂದಿರುವ ರಾಮ್​ಗೋಪಾಲ್ ವರ್ಮಾ, ಈ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ನೇರವಾಗಿ ಹೇಳಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net