ಮಾನಸಿಕ ಸ್ಥಿಮಿತ ಕಳೆದುಕೊಂಡ ಶ್ರುತಿ ಹಾಸನ್​ ಇದೀಗ ಹೇಗಿದ್ದಾರೆ?

shruti-hassan-health-issues
Published on

ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದಾರೆ. ಮನೋವ್ಯಾದಿಗೆ ಒಳಗಾಗಿ ಮೆಂಟಲಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಕಳೆದ ಮೂರು ವರ್ಷದಿಂದ ಅದಕ್ಕೆ ಔಷಧೋಪಚಾರವನ್ನೂ ಮಾಡುತ್ತಿದ್ದಾರಂತೆ!

ಹೌದು, ಶ್ರುತಿ ಹಾಸನ್​ ಮೊದಲಿನಂತಿಲ್ಲ. ಅವರ ಜೀವನ ಶೈಲಿ ಬದಲಾಗಿದೆ. ಸಿನಿಮಾ ಫೆಲ್ಯೂರ್​, ಇಲ್ಲ ಸಲ್ಲದ ವದಂತಿಗಳು, ಲವ್​ ಬ್ರೇಕಪ್​, ಕುಡಿತದ ವ್ಯಸನ ಹೀಗೆ ಹಲವು ಏರಿಳಿತಗಳು ಜೀವನದಲ್ಲಿ ಘಟಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರು ಶ್ರುತಿ. ಇದೀಗ ಅದೆಲ್ಲದಕ್ಕೂ ಉತ್ತರ ಕಂಡುಕೊಂಡಿದ್ದಾರೆ. ಇದೀಗ ಒಂದು ಹನಿ ಮದ್ಯವನ್ನೂ ಮುಟ್ಟುವುದಿಲ್ಲವಂತೆ ಶ್ರುತಿ.

ಸಿನಿಮಾ ಅವಕಾಶಗಳೂ ಇಲ್ಲ ಎಂಬುದೂ ಈ ವ್ಯಾದಿಗೆ ಮುಖ್ಯ ಕಾರಣ. ಇದರಿಂದ ಹೊರಬರಲು, ಮಾನಸಿಕವಾಗಿ ಗಟ್ಟಿಯಾಗಲು ಥೆರಪಿಯೊಂದರ ಮೊರೆ ಹೋಗಿದ್ದರು. ಅದರಿಂದ ಕೊಂಚ ಸುಧಾರಿಸಿಕೊಂಡಿರುವ ಅವರು, ಈಗ ಅದೇ ಥೆರಪಿಯನ್ನು ಬೇರೆಯವರೂ ಬಳಸುವಂತೆ ಸಜೆಸ್ಟ್​ ಮಾಡಿದ್ದಾರೆ. ‘ಕಳೆದ ಮೂರು ವರ್ಷಗಳಿಂದ ನಾನಾ ಕಾರಣಗಳಿಂದಾಗಿ ಮಾನಸಿಕವಾಗಿ ನಾನು ಕುಗ್ಗಿ ಹೋಗಿದ್ದೆ. ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನಿಸಿದ್ದೆ. ಕೊನೆಗೆ ಥೆರಪಿಯೊಂದು ಸಹಕಾರಿ ಆಯಿತು. ಈ ರೀತಿಯ ಮಾನಸಿಕ ಖಿನ್ನತೆಗೊಳಗಾಗಿದ್ದರೆ, ಆ ಥೆರಪಿಯನ್ನು ನಾನು ಸಜೆಸ್ಟ್ ಮಾಡಬಲ್ಲೆ’ ಎಂದಿದ್ದಾರೆ.

ಸದ್ಯ ರವಿತೇಜ ಜತೆಗಿನ ಕ್ರ್ಯಾಕ್​ ಸಿನಿಮಾದ ಮಾತಿನ ಭಾಗದ ಶೂಟಿಂಗ್​ ಮುಗಿಸಿರುವ ಶ್ರುತಿ, ಹಾಡಿನ ಚಿತ್ರೀಕರಣಕ್ಕೆ ಕಾಯುತ್ತಿದ್ದಾರೆ. ಇತ್ತ ಪವನ್​ ಕಲ್ಯಾಣ್ ಜತೆ ವಕೀಲ್​ ಸಾಬ್​ ಸಿನಿಮಾದಲ್ಲೂ ಶ್ರುತಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಅದಿನ್ನೂ ಅಧಿಕೃತ ಆಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net