

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಹಿಂದು ಸವಾಜ ದಾನ ಮತ್ತು ಧರ್ಮಕ್ಕೆ ಪ್ರತೀಕವಾದ ಪರಂಪರೆ ಹೊಂದಿದೆ. ದೇವಾಲಯದಲ್ಲಿರುವ ಸಂಪತ್ತು ಕೊಳ್ಳೆ ಹೊಡೆಯುವ ಹುನ್ನಾರ ಈಗಿನ ಸರ್ಕಾರ ವಾಡುತ್ತಿವೆ. ದಕ್ಷವಾದ ರಾಜ, ಇಂದಿನ ಕಾಲದಲ್ಲಿ ಧಾರ್ಮಿಕ ಮುಖಂಡನಿದಲ್ಲಿ ದೇವಸ್ಥಾನ, ಅಲ್ಲಿನ ವ್ಯವಸ್ಥೆ ಉಳಿಸಲು ಸಾಧ್ಯ. ಪುತ್ತಿಗೆ ಬ್ರಹ್ಮಕಲಶದಿಂದ ಹಿಂದು ಧರ್ಮದ ಪುನರುತ್ಥಾನವಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಪುತ್ತಿಗೆ ಮಹೋತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಡಾ.ಅರುಯ್ ಉಳ್ಳಾಲ ಧಾರ್ಮಿಕ ಉಪನ್ಯಾಸ ನೀಡಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಮೂಡುವೇಣುಪುರ ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಳ ಆಡಳಿತ ಮೊಕ್ತೇಸರ ಉಮೇಶ್ ಜಿ.ಪೈ, ಶ್ರೀ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುವಾರ್ ಎಸ್.ಎಸ್., ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಜೀರ್ಣೋದ್ಧಾರ ಸಮಿತಿ ಪ್ರಮುಖ ಕೆ.ಶ್ರೀಪತಿ ಭಟ್ ಉಪಸ್ಥಿತರಿದ್ದರು. ಡಾ.ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.
ದಾನಿಗಳಿಗೆ ಸನ್ಮಾನ
ಜೀರ್ಣೋದ್ಧಾರ ಕೆಲಸಕ್ಕೆ ಪ್ರಥಮ ಹಂತದಲ್ಲಿ ಸಹಕರಿಸಿದ ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಅವರನ್ನು ಸನ್ಮಾನಿಸಲಾಯಿತು. ಸ್ವಾಗತ ಗೋಪುರ ಕೊಡುಗೆ ನೀಡಿದ ಪುತ್ತಿಗೆಗುತ್ತು ನೀಲೇಶ್ ಶೆಟ್ಟಿ ಕೊಲಕಾಡಿ, ಎರಡನೇ ಅಂಗಣದ ನೆಲ ಹಾಸಿನ ಕೊಡುಗೆ ನೀಡಿದ ಪುತ್ತಿಗೆ ಮುರಂತಕೋಡಿ ವಾಸುದೇವ ಭಟ್, ಅಂಕುರ ಕೋಣೆಯ ಕೊಡುಗೆ ನೀಡಿದ ಅನಿತಾ ತಂತ್ರಿ ಅವರ ಪರವಾಗಿ ಶ್ರೀನಿವಾಸ ಭಟ್, ಸೋಮನಾಥ ದೇವರ ಅಗ್ರಸಭೆಯ ಮರದ ಬಾಗಿಲು ಒದಗಿಸಿದ ಜನಾರ್ದನ ಪ್ರಭು ಗುಡ್ಡೆಯಂಗಡಿ, ದೇವಳದ ಎದುರಿನ ಸೇತುವೆ ಜಾಗ ದಾನವಾಗಿ ನೀಡಿದ ನಾಗವರ್ಮ ಜೈನ್ ಅವರನ್ನು ಗೌರವಿಸಲಾಯಿತು.
ಭಗವಂತ ನಮ್ಮಲ್ಲಿದ್ದಾನೆ. ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ನಮ್ಮಲ್ಲಿರುವ ಅಹಂಕಾರ ದೂರ ವಾಡಿ ಸರಳ ಜೀವನ ವಾಡಿದಲ್ಲಿ ದೇವರಿಗೆ ಹತ್ತಿರವಾಗುತ್ತೇವೆ. ಯುವರಾಜ್ ಜೈನ್, ಅಧ್ಯಕ್ಷರು, ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, ಮೂಡುಬಿದಿರೆ