ಸೃಜನಶೀಲ ಚಿಂತನೆಯಿಂದ ಶೈಕ್ಷಣಿಕ ಬೆಳವಣಿಗೆ: ಪ್ರೊ.ದಿನೇಶ್ ಚೌಟ ಹೇಳಿಕೆ

Mbd_Alvas Science
Published on

ಮೂಡುಬಿದಿರೆ: ಯುವಜನರು ವಿಮರ್ಶಾತ್ಮಕ, ಸೃಜನಶೀಲ ಚಿಂತನೆ, ಸಂವಹನ, ಸಹಯೋಗ ಮತ್ತು ಸಮಯ ನಿರ್ವಹಣೆ ಜೀವನದಲ್ಲಿ ಅಳವಡಿಸಿಕೊಂಡರೆ ವಿಜ್ಞಾನ ವಿಷಯದಲ್ಲಿ ಶೈಕ್ಷಣಿಕ ಬೆಳವಣಿಗೆ ಸಾಧ್ಯ. ವಿಜ್ಞಾನದಲ್ಲಿ ನಾವೀನ್ಯತೆ ಕಂಡುಕೊಂಡು ಜಾಗತಿಕ ಬೆಳವಣಿಗೆಯಾಗಬೇಕಾದರೆ ಪರಿಣಾಮಕಾರಿ ಆಲಿಸುವಿಕೆ ಹಾಗೂ ನಿರಂತರ ಕಲಿಯುವಿಕೆ ಅಗತ್ಯ ಎಂದು ಉಜಿರೆಯ ಎಸ್‌ಡಿಎಂ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ ಹೇಳಿದರು.

ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.

ವಿಕಸಿತ ಭಾರತದ ನಿರ್ಮಾಣಕ್ಕಾಗಿ ಭಾರತೀಯ ಯುವ ಜನತೆಯನ್ನು ವಿಜ್ಞಾನ ಹಾಗೂ ನಾವೀನ್ಯತೆಯ ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ನಿರ್ಮಾಣ ಎಂಬ ಘೋಷ ವಾಕ್ಯದಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ಸಿ.ವಿ.ರಾಮನ್ ತಂಡ ಪ್ರಥಮ ಸ್ಥಾನ ಪಡೆಯಿತು.

ಪ್ರಾಂಶುಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ, ಕಾರ್ಯಕ್ರಮ ಸಂಯೋಜಕಿ ಮಧುಶ್ರೀ, ವಸುಧಾ ಭಟ್, ಸುಹಾಸ್ ಹಾಗೂ ನಭ ಉಪಸ್ಥಿತರಿದ್ದರು. ಸುನೈನಾ ನಿರೂಪಿಸಿದರು. ಸುಹಾಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net