ಪುಣ್ಯಭಾವದಲ್ಲಿ ದೇವಳ ಜೀರ್ಣೋದ್ಧಾರ

Upp_Restoration
Published on

ಉಪ್ಪಿನಂಗಡಿ: ಒಂದೂವರೆ ಶತಮಾನದ ಇತಿಹಾಸವುಳ್ಳ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯವನ್ನು ಪುನರ್ ನಿರ್ಮಿಸುವ ಸಂಕಲ್ಪವನ್ನು ಹೊಂದಲಾಗಿದ್ದು, ಈ ಪುಣ್ಯ ಕಾರ್ಯದಲ್ಲಿ ಊರ ಪರವೂರ ಭಕ್ತರು ಭಾಗಿಯಾಗಬೇಕೆಂದು ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೋಕ್ತೆಸರ ಬಿ.ಗಣೇಶ್ ಶೆಣೈ ಹೇಳಿದರು.

ದೇವಳದ ಜೀರ್ಣೋದ್ಧಾರ ಕುರಿತಂತೆ ಉಪ್ಪಿನಂಗಡಿಯಲ್ಲಿ ಭಕ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಸುಮಾರು 150 ವರ್ಷಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿ ಸಮಾಜೋದ್ದಾರದ ಕಾರ್ಯವನ್ನು ನಮ್ಮ ಹಿರಿಯರು ಮಾಡಿದ್ದರು. ಇದೀಗ ಪರಿವರ್ತನೆಯ ಕಾಲಘಟ್ಟದಲ್ಲಿ ದೇವಾಲಯವನ್ನು ಸುವ್ಯವಸ್ಥಿತ ರೀತಿಯಲ್ಲಿ ಪುನರ್ ನಿರ್ಮಿಸುವ ಸೌಭಾಗ್ಯ ಒದಗಿ ಬಂದಿದೆ. ಈ ಅವಕಾಶವನ್ನು ಪುಣ್ಯ ಕಾರ್ಯದ ಭಾವದಲ್ಲಿ ಸ್ವೀಕರಿಸಿಕೊಂಡು ಎಲ್ಲರೂ ಕೈಜೋಡಿಸಬೇಕೆಂದರು.

ದೇವಳದ ಮೊಕ್ತಸರಾದ ಯು. ನಾಗರಾಜ ಭಟ್, ದೇವಿದಾಸ ಭಟ್, ಪ್ರಮುಖರಾದ ಎಚ್.ವಾಸುದೇವ ಪ್ರಭು, ಅಚ್ಯುತ ಪ್ರಭು, ಕರಾಯ ಗಣೇಶ ನಾಯಕ್, ಸತೀಶ ನಾಯಕ್, ನರಸಿಂಹ ನಾಯಕ್, ನೇಜಿಕಾರ್ ಸುರೇಶ ಪೈ, ಚಂದ್ರಕಾಂತ ಶೆಣೈ, ಕರಾಯ ರಾಘವೇಂದ್ರ ನಾಯಕ್, ಉಪೇಂದ್ರ ಪೈ, ಏಕನಾಥ ಶೆಣೈ, ಕೇಪುಳು ರಾಜೇಶ ನಾಯಕ್, ಶಾಂತರಾಮ ಶೆಣೈ, ಮಾಧವ ನಾಯಕ್, ಎಂ.ಶ್ರೀನಿವಾಸ ಭಟ್, ಪಣಕಜೆ ಪ್ರಸಾದ ಶೆಣೈ, ನಿಡ್ಡೋಡಿ ರವೀಂದ್ರ ಪ್ರಭು, ರವಳನಾಥ ಪ್ರಭು, ಶ್ರೀಕಾಂತ ಪ್ರಭು, ಯು.ರಾಜೇಶ ನಾಯಕ್ ಪೆದಮಲೆ, ಯು.ಯೋಗಿಶ ಪೈ, ಗಿರಿಧರ್ ನಾಯಕ್, ಮಂಜುನಾಥ ಭಟ್, ಅರ್ಚಕರಾದ ರವೀಂದ್ರ ಭಟ್, ಸುಬ್ರಹ್ಮಣ್ಯ ಭಟ್, ಸಂದೀಪ್ ಭಟ್, ಶ್ರೀಧರ ಭಟ್, ರಾಜೇಂದ್ರ ಭಟ್ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪಕರಾದ ಕೆ.ರಾಮಕೃಷ್ಣ ಪ್ರಭು ಮತ್ತು ಮಂಜುನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net