ಕಾಸರಗೋಡು: ರಾಷ್ಟ್ರೀಯ ಆಯುಷ್ ಮಿಷನ್ ಜಿಲ್ಲೆಯಲ್ಲಿ ಮಲ್ಟಿ ಪರ್ಪಸ್ ವರ್ಕರ್ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 40 ವರ್ಷ ವಯೋಮಿತಿಯಾಗಿದ್ದು, ಜಿ.ಎನ್.ಎಂ. ನರ್ಸಿಂಗ್ ವಿತ್ ಕೇರಳ ನರ್ಸಿಂಗ್ ಆಂಡ್ ಮಿಡ್ವೈಫ್ ಕೌನ್ಸಿಲ್ ನೋಂದಣಿ ಯಾ ಸಮಾನವಾದ ಅರ್ಹತೆ ಇರಬೇಕು. ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು. 15 ಸಾವಿರ ರೂ. ವೇತನವಿದ್ದು ಆಸಕ್ತ ಉದ್ಯೋಗಾರ್ಥಿಗಳು ಪ್ರಮಾಣಪತ್ರಗಳ ಜತೆ ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು, ರಾಷ್ಟ್ರೀಯ ಆಯುಷ್ ಮಿಷನ್, ಎರಡನೇ ಮಹಡಿ, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಪಡನ್ನಕ್ಕಾಡು ಪಿ.ಒ., ಕಾಸರಗೋಡು 671314 ಎಂಬ ವಿಳಾಸಕ್ಕೆ ಜನವರಿ 28ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರ್ಮನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಮಾಹಿತಿಗೆ 8848002953 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.