ರೈತರ ಬೇಡಿಕೆಗೆ ಸ್ಪಂದಿಸುವ ಕಾರ್ಯ

raita dhwani
ಕೋಟದ ರೈತಧ್ವನಿ ಸಂಘಟನೆ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಚಾಲನೆ ನೀಡಿದರು.
Published on

ಕೋಟ: ರೈತರ ಬೇಡಿಕೆಗಳಿಗೆ ಜಿಲ್ಲಾಡಳಿತದ ಮೂಲಕ ಸರ್ಕಾರದ ಕದ ತಟ್ಟುವ ಕಾರ್ಯ ನಿಜಕ್ಕೂ ಆಶಾದಾಯಕ ಬೆಳವಣಿಗೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಹೇಳಿದರು.

ಕೋಟದ ರೈತಧ್ವನಿ ಸಂಘಟನೆ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕೋಟ ಅಮೃತೇಶ್ವರಿ ದೇಗುಲದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಂಘಟನೆ ಅಧ್ಯಕ್ಷ ಎಂ.ಜಯರಾಮ್ ಶೆಟ್ಟಿ, ರೈತ ಸಂಘಟನೆ ಪ್ರಮುಖರಾದ ಎಂ.ಶಿವ ಪೂಜಾರಿ, ಬಾಬು ಶೆಟ್ಟಿ, ಮಹೇಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಭಾಸ್ಕರ್ ಶೆಟ್ಟಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಮೇಶ್ ಮೆಂಡನ್, ಕೀರ್ತಿಶ್ ಪೂಜಾರಿ, ದಿನೇಶ್ ಪೂಜಾರಿ, ಸಂತೋಷ್ ಕುಮಾರ್, ಸುರೇಶ್ ಕೋಟ, ತಿಮ್ಮ ಕಾಂಚನ್, ನಿತ್ಯಾನಂದ, ಪ್ರಕಾಶ್ ಶೆಟ್ಟಿ ಮತ್ತಿತರರು ಇದ್ದರು.

ಸಭೆ ಆಯೋಜನೆ: ರೈತ ಸಂಘಟನೆಗಳ ಮನವಿ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅ.5ರಂದು ಮಧ್ಯಾಹ್ನ 2.30ಕ್ಕೆ ಜಿಲ್ಲೆಯ ರೈಸ್ ಮಿಲ್ ಮಾಲೀಕರ ಹಾಗೂ ರೈತ ಸಂಘಟನೆ ಪ್ರಮುಖರ ಸಭೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net