ಆರ್ಡಿ: ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯಿತಿಯ 11 ಮಂದಿ ಸದಸ್ಯರು ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿದ್ದು, ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸಲು ಸೋಮವಾರ ನಿರ್ಧಾರಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಆಗ್ರಹಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಶೇಡಿಮನೆ, ಉಪಾಧ್ಯಕ್ಷೆ ಬೇಬಿ ಹೆಗ್ಡೆ, ಸದಸ್ಯರಾದ ಸುಶೀಲಾ ಪೂಜಾರಿ, ಜಯಲಕ್ಷ್ಮೀ, ಸದಾನಂದ ಪೂಜಾರಿ, ಜ್ಯೋತಿ ಪೂಜಾರ್ತಿ,ದಯಾನಂದ ಪೂಜಾರಿ, ಸುರೇಶ್ ಶೆಟ್ಟಿ, ಪ್ರತಾಪ್ ಶೆಟ್ಟಿ ಎಂ.ಆರ್, ರತಿ ಕುಲಾಲ್, ರಾಧಾ ಅವರ ಸಹಿ ಒಳಗೊಂಡ ಚುನಾವಣಾ ಬಹಿಷ್ಕಾರ ಪತ್ರವನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.