ಕಾಸರಗೋಡು: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ , ಕನ್ನಡ ಗ್ರಾಮದ ಸಹಯೋಗದಲ್ಲಿ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ, ಕೇರಳ ದಾಸ ಸಾಹಿತ್ಯ ಪರಿಷತ್ತು ಸಹಕಾರದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಮಾ.27ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ ಆಮಂತ್ರಣ ಪತ್ರಿಕೆ ಅಂಚೆ ಮೂಲಕ ಕಳುಹಿಸಲು ಕಾಸರಗೋಡು ಜಿಲ್ಲೆ ಸೇರಿದಂತೆ ಕೇರಳ ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಕಲಾವಿದರು, ಲೇಖಕರು, ಸಾಹಿತಿಗಳು, ಕವಿಗಳು, ಮಾಧ್ಯಮದವರು, ಸಾಮಾಜಿಕ ಜಾಲತಾಣಗಳ ಅಡ್ಮಿನ್‌ಗಳು ಮತ್ತು ಸಾರ್ವಜನಿಕರು, ಸಾಹಿತ್ಯಾಸಕ್ತರ ಹೆಸರು, ವಿಳಾಸ, ಮೊಬೈಲ್, ವಾಟ್ಸಾೃಪ್ ಸಂಖ್ಯೆ ಅಂಚೆ ಕಾರ್ಡ್ ಅಥವಾ ಸಾಮಾನ್ಯ ಅಂಚೆಯ ಮೂಲಕ ಬರೆದು ಕಳುಹಿಸಲು ವಿನಂತಿಸಲಾಗಿದೆ. ಮಾಹಿತಿಯನ್ನು ಶಿವರಾಮ ಕಾಸರಗೋಡು, ಅಧ್ಯಕ್ಷರು, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಕನ್ನಡ ಗ್ರಾಮ, ಕನ್ನಡಗ್ರಾಮ ರಸ್ತೆ, ಕಾಸರಗೋಡು -671121, ಮೊಬೈಲ್ :-9448572016, 9901951965 ಅಥವಾ ವಾಟ್ಸಾೃಪ್ ಮೂಲಕ ಈ ವಿಳಾಸಕ್ಕೆ ಕಳುಹಿಸುವಂತೆ ಪ್ರಕಟಣೆ ತಿಳಿಸಿದೆ.